ವಿಜಯಗೆ ರಿಯಲ್ ಲೈಫ್ ನಲ್ಲೂ ಹೀರೋ ಆಗಿ ಎಂದ ಕೋರ್ಟ್

248

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿ ರಿಯಲ್ ಲೈಫ್ ನಲ್ಲೂ ಹೀರೋ ಆಗಿ ಎಂದು ತಮಿಳು ಸ್ಟಾರ್ ನಟ ವಿಜಯಗೆ ಮದ್ರಾಸ್ ಹೈಕೋರ್ಟ್ ಹೇಳಿದೆ. 2012ರಲ್ಲಿ ಇಂಗ್ಲೆಂಡ್ ನಿಂದ ದುಬಾರಿ ರೋಲ್ಡ್ ರಾಯ್ ಘೋಸ್ಟ್ ಕಾರನ್ನ ಖರೀದಿಸಿದ್ರು. ಇದರ ಆಮದು ತೆರಿಗೆ ಹೆಚ್ಚಿಗೆ ವಿಧಿಸಲಾಗಿದೆ ಎಂದು ರಿಟ್ ಅರ್ಜಿ ಸಲ್ಲಿಸಿದ್ರು.

ಈ ಅರ್ಜಿಯನ್ನ ವಜಾಗೊಳಿಸಿರುವ ಕೋರ್ಟ್, 2 ವಾರದೊಳಗೆ 1 ಲಕ್ಷ ರೂಪಾಯಿ ದಂಡವನ್ನ ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಪಾವತಿಸಿ ಎಂದಿದೆ. ಖ್ಯಾತ ನಟರಾಗಿ ಸಕಾಲದಲ್ಲಿ ತೆರಿಗೆ ಪಾವತಿಸಿ ನಿಜ ಜೀವನದಲ್ಲೂ ಹೀರೋ ಆಗಿ ಎಂದಿದೆ. ಇನ್ನು ಈಗಾಗ್ಲೇ ತೆರಿಗೆ ಪಾವತಿಸಿದ್ದರೆ 2012ರ ಜುಲೈ17ರ ಮಧ್ಯಂತರ ಆದೇಶದಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದೆ.




Leave a Reply

Your email address will not be published. Required fields are marked *

error: Content is protected !!