ಬ್ರೇಕಿಂಗ್ ನ್ಯೂಸ್
Search

ಸೈಕಲ್, ಟ್ರೀ ಪಾಥ್ ಗಳಲ್ಲಿ ಬೈಕ್ ‘ಕಾರು’ಬಾರು

401

ಹುಬ್ಬಳ್ಳಿ: ನಗರದ ವಿದ್ಯಾನಗರದಿಂದ ತೋಳನಕೆರೆಯವರೆಗೂ ಸುಮಾರು 2.2 ಕಿಲೋ ಮೀಟರ್ ಟೆಂಡರ್ ಶ್ಯೂರ್ ಚತುಷ್ಪಥ ರಸ್ತೆ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಈ ರಸ್ತೆ ಪ್ಲ್ಯಾನ್ ಪ್ರಕಾರ  ನಿರ್ಮಾಣಗೊಂಡಿದ್ದರೂ ಕೆಲ ಲೋಪದೋಷಗಳು ಎದ್ದು ಕಾಣುತ್ತಿವೆ ಅಂತಾ ಸ್ಥಳೀಯರು ಆರೋಪಿಸ್ತಿದ್ದಾರೆ.

ರಸ್ತೆಯ ಎರಡೂ ಕಡೆಗಳಲ್ಲಿ ಪುಟ್ಪಾತ್, ಸೈಕಲ್ ಪಾಥ್, ಕೆಲವು ಕಡೆಗಳಲ್ಲಿ ಟ್ರೀ ಪಾಥ್ ಗಳನ್ನ ನಿರ್ಮಿಸಿದ್ದಾರೆ. ಈ ರಸ್ತೆಗೆ ಸೈಕಲ್ ಹಾಗೂ ಟ್ರೀ ಪಾಥ್ ಅವಶ್ಯಕತೆ ಇದೆಯೋ ಇಲ್ಲವೋ ಅನ್ನೋದನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಚಿಸಿಬೇಕಿತ್ತು ಅಂತಿದ್ದಾರೆ. ಯಾಕಂದ್ರೆ, ಈ ರಸ್ತೆಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿ ಅನೇಕ ಶಾಲಾ ಕಾಲೇಜುಗಳು, ಆಫೀಸುಗಳು, ಮಾಲ್ ಗಳು, ಅಪಾರ್ಟ್ಮೆಂಟ್ ಗಳು ಇರುವುದ್ರಿಂದ ಸದಾ ವಾಹನಗಳ ಸಂಚಾರ, ಜನದಟ್ಟಣೆ ಇರುತ್ತದೆ. ಹೀಗಾಗಿ ಸೈಕಲ್ ಪಾಥ್ ಗಳಲ್ಲಿಯೂ ಬೈಕ್, ಕಾರ್, ಆಟೋಗಳನ್ನ ನಿಲ್ಲಿಸಿ ಹೋಗ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿದೆ ಅಂತಿದ್ದಾರೆ ಇಲ್ಲಿನ ಜನರು.

ಸೈಕಲ್ ಪಾಥ್ ಬದಲಾಗಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬಹುದಿತ್ತು. ಇದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿರಲಿಲ್ಲ. ಸಂಚಾರಿನಿಯಮಗಳ ಉಲ್ಲಂಘನೆಯು ಆಗುತ್ತಿರಲ್ಲಿಲ್ಲ. ಹೀಗಾಗಿ ಟೆಂಡರ್ ಶ್ಯೂರ್ ರಸ್ತೆ ವ್ಯವಸ್ಥಿತವಾಗಿ ನಿರ್ಮಾಣಗೊಂಡ್ಡಿರೂ ಸಂಚಾರಕ್ಕೆ ಕಿರಿಕಿರಿ ತಪ್ಪಿದ್ದಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.

ಸಾಂದರ್ಭಿಕ ಚಿತ್ರಗಳು




Leave a Reply

Your email address will not be published. Required fields are marked *

error: Content is protected !!