ಟೆನ್ನಿಸ್ ಅಂಗಳಕ್ಕೆ ವಿದಾಯ ಹೇಳಿದ ಮರಿಯಾ

314

ಪ್ಯಾರಿಸ್: ಟೆನ್ನಿಸ್ ಅಂಗಳದ ಅತ್ಯಂತ ಸುಂದರಿ ಆಟಗಾರ್ತಿ ಎಂದೇ ಖ್ಯಾತಿ ಪಡೆದಿರುವ ಹಾಗೂ ಐದು ಬಾರಿ ಗ್ರಾನ್ ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾಳೆ.

ಮ್ಯಾಗಝಿನ್ ವೊಂದಕ್ಕೆ ಸಂದರ್ಶನ ನೀಡಿರುವ 32 ವರ್ಷದ ಆಟಗಾರ್ತಿ ಮರಿಯಾ, ಟೆನ್ನಿಸ್ ವೃತ್ತಿ ಬದುಕಿಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಗ್ರಾನ್ ಸ್ಲಾಮ್ ಮುಡಿಗೇರಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಖ್ಯಾತಿಯನ್ನ ಗಳಿಸಿದ ಮರಿಯಾ, 2016ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ನಲ್ಲಿ ಡ್ರಗ್ಸ್ ಸೇವನೆ ಪರೀಕ್ಷೆಯಲ್ಲಿ ಸಿಕ್ಕು, 15 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ಳು.

ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಮೆರೆದ ರಷ್ಯಾದ ಆಟಗಾರ್ತಿ ಮರಿಯಾ, ಕಳೆದೊಂದು ವರ್ಷದಿಂದ ಟೆನ್ನಿಸ್ ಅಂಗಳಕ್ಕೆ ಕಾಲಿಟ್ಟಿಲ್ಲ. ದೀರ್ಘ ಕಾಲದಿಂದ ಭುಜದ ನೋವಿನಿಂದ ಬಳಲುತ್ತಿದ್ದು, ಪ್ರಸ್ತುತ 373ನೇ ರ್ಯಾಂಕ್ ನಲ್ಲಿರುವ ಈಕೆ ವಿದಾಯದ ಮಾತು ಆಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!