ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ: ಈ ಸ್ವಾಮೀಜಿಗಳಿಗೂ ಬೆಲೆ ಇಲ್ವಾ?

480

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯಮುಗಿದಿರುವುದರಿಂದ ಸಹಜವಾಗಿ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯವನ್ನು ಸರ್ಕಾರ ಒಪ್ಪಿಕೊಂಡಿದೆ ಅನ್ನೋ ಸ್ಪಷ್ಟವಾಗಿದೆ.

ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಪರಿಷ್ಕರಣೆಯಲ್ಲಿ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಹೊಂದಿದೆ ಎಂದಿದೆ. ಇನ್ನು ಬಸವಣ್ಣನವರ ಕುರಿತು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಣೆ ಮಾಡಲಾಗಿದೆ. ಕುವೆಂಪು ಅವರ ನಾಡಗೀತೆಗೆ ಅವಮಾನ ಮಾಡುವ ದೃಷ್ಟಿಯಲ್ಲಿ ಮೂಲಕವನದ ಶೈಲಿಯಲ್ಲಿ ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಇಲ್ಲಿ ಸರ್ಕಾರದ ನಡೆಯನ್ನು ನೋಡಿದರೆ ಎಷ್ಟೊಂದು ಜಾಣತನದಿಂದ ವರ್ತಿಸುತ್ತಿದೆ ಅನ್ನೋದಕ್ಕೆ ಆದೇಶ ಪ್ರತಿ ಸಾಕ್ಷಿಯಾಗಿದೆ. ಹಲವಾರು ಸಾಹಿತಿಗಳು, ಸಂಘಟನೆಗಳು, ಸ್ವಾಮೀಜಿಗಳು ಯಾವೆಲ್ಲ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಯಡವಟ್ಟುಗಳನ್ನು ಮಾಡಿದೆ. ಯಾವೆಲ್ಲ ಅಂಶಗಳನ್ನು ತಿರುಚಲಾಗಿದೆ. ಕುವೆಂಪು ಅವರಿಗೆ ಅವಮಾನ ಮಾಡಿದ ವ್ಯಕ್ತಿ, ಶೈಕ್ಷಣಿಕ ಮಾನದಂಡ ಸೇರಿದಂತೆ ಸಾಕಷ್ಟು ವಿವಾದಾತ್ಮಕದಲ್ಲಿ ತೊಡಗಿರುವ ವ್ಯಕ್ತಿಯ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದಾರೆ ಅನ್ನೋದರ ಕುರಿತು ಕಳೆದ ಹಲವು ದಿನಗಳಿಂದ ರಾಜ್ಯದ ಜನತೆ ಗಮನಿಸಿದೆ. ಸಾಣೇಹಳ್ಳಿ ಮಠದ ಸ್ವಾಮೀಜಿ, ಒಕ್ಕಲಿಗ ಸಮುದಾಯದ ಸ್ವಾಮೀಜಿ, ಲಿಂಗಾಯತ ಮಠಗಳ ಸ್ವಾಮೀಜಿಗಳು ಸೇರಿ ಅನೇಕ ಸ್ವಾಮೀಜಿಗಳು ಮಾಡಿದ ಯಾವ ಮನವಿಗೂ ಸರ್ಕಾರ ಸೊಪ್ಪು ಹಾಕಿಲ್ಲ.

ಇಷ್ಟೆಲ್ಲ ವಿವಾದಾತ್ಮಕ ಬೆಳವಣಿಗೆಗಳು ನಡೆದರೂ ಸಹ ಸರ್ಕಾರ, ಯಾವ ಸಾಹಿತಿಗಳು, ಸ್ವಾಮೀಜಿಗಳ ಮಾತಿಗೂ ಬೆಲೆ ಕೊಡದೆ ಈಗ ಪರಿಷ್ಕರಣೆಗೊಂಡಿರುವ ಪುಸ್ತಕಗಳನ್ನೇ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲು ಮುಂದಾಗಿರುವುದು ನಿಜಕ್ಕೂ ದುರಂತವೆಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!