ಇಂದು ಮನೆ ಮನೆ ಮತಯಾಚನೆ

76

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ 2023 ಕೊನೆಯ ಹಂತಕ್ಕೆ ಬಂದಿದೆ. ಮತದಾನಕ್ಕೆ ಇನ್ನು ಕೆಲವು ಗಂಟೆಗಳು ಬಾಕಿ ಉಳಿದಿವೆ. ಇಂದು ಮತಯಾಚನೆಯ ಕೊನೆಯ ದಿನ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತಯಾಚನೆ ಮಾಡಲಿದ್ದಾರೆ.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿದ್ದು, ಬಹುತೇಕ ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದು ಇದೆ. ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ನಿಂದ ತ್ರಿಕೋನ ಸ್ಪರ್ಧೆಯಿದೆ. ಇಷ್ಟು ದಿನಗಳ ಬಹಿರಂಗ ಪ್ರಚಾರ ನಡೆಸಿದ ಅಭ್ಯರ್ಥಿಗಳು ಇಂದು ಸಂಜೆಯ ತನಕ ಕ್ಷೇತ್ರದ ಮತದಾರರ ಮನೆಗಳಿಗೆ ತೆರಳಿ ಮತ ಕೇಳಲಿದ್ದಾರೆ.

ಮೇ 10 ಬುಧವಾರ ಮತದಾನ ನಡೆಯಲಿದೆ. ಮೇ 13 ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಅನ್ನೋ ಕುತೂಹಲಕ್ಕೆ ಅಂದು ತೆರೆ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!