ಕೊಪ್ಪಳದಲ್ಲಿ ದ್ವಿಶತಕದತ್ತ ಕೆಂಪು ಸುಂದರಿ

153

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ದೇಶದಲ್ಲಿ ದಿನದಿಂದ ದಿನಕ್ಕೆ ತರಕಾರಿ ದರ ದುಪ್ಪಟ್ಟಾಗುತ್ತಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಕೊಪ್ಪಳದಲ್ಲಿ ಟೊಮೆಟೊ ದರ ದ್ವಿಶತಕದತ್ತ ಬಂದಿದೆ. ಸೋಮವಾರ ಒಂದು ಕೆಜಿ ಟೊಮೆಟೊ 180 ರೂಪಾಯಿಗೆ ಮಾರಾಟವಾಗಿದೆ.

ಕನಕಗಿರಿ ಎಪಿಎಂಸಿ ಮಾರುಕಟ್ಟೆಯಲ್ಲಿ 22 ಕೆಜಿ ಟೊಮೆಟೊ ಬಾಕ್ಸ್ ದರ 2,500ದಿಂದ 2,900ರ ತನಕ ಮಾರಾಟವಾಗಿದೆ. ಇದರಿಂದಾಗಿ ಜಿಲ್ಲೆಯ ಜನರು ಬೆಲೆ ಏರಿಕೆ ಬಿಸಿಗೆ ರೋಸಿ ಹೋಗಿದ್ದಾರೆ. ಟೊಮೆಟೊ ಒಂದಕ್ಕೆ 200 ರೂಪಾಯಿ ಕೊಟ್ಟರೆ ಉಳಿದ ತರಕಾರಿ ಖರೀದಿಸುವುದು ಹೇಗಪ್ಪಾ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!