ಸಿಂದಗಿಯಲ್ಲಿ ಕಳ್ಳರ ಬಂಧನ: 5.51 ಲಕ್ಷ ಮೌಲ್ಯದ ಚಿನ್ನಾಭರಣ ವಶ

414

ಪ್ರಜಾಸ್ತ್ರ ಅಪರಾಧ ಸುದ್ದಿ

ಸಿಂದಗಿ: ಪಟ್ಟಣದಲ್ಲಿ ಆಗಾಗ ಸಂಭವಿಸುತ್ತಿದ್ದ ಮನೆ ಕಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರ ಕೈಗೆ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಚಿಕ್ಕಸಿಂದಗಿ ಬೈಪಾಸ್ ಹತ್ತಿರ ಅನುಮಾನಸ್ಪದವಾಗಿ ಹೋಗುತ್ತಿದ್ದ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಕಳೆದ 2 ವರ್ಷಗಳಿಂದ ಕಳ್ಳತನ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಸಿಂದಗಿ ಹುಡ್ಕೊ ನಿವಾಸಿ ಸಿದ್ದಪ್ಪ ಜೇರಟಗಿ(37) ಹಾಗೂ ಆಲಮೇಲ ತಾಲೂಕಿನ ನಾಗರಾಳ ಗ್ರಾಮದ ಸಿದ್ರಾಮ ಪಾಟೀಲ(35) ಬಂಧಿತ ಆರೋಪಿಗಳು. ಬಂಧಿತರಿಂದ 141.379 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಅಂದಾಜು ಮೌಲ್ಯ 5 ಲಕ್ಷದ 51 ಸಾವಿರದ 732 ರೂಪಾಯಿ ಆಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಿಪಿಐ ಡಿ.ಹುಲುಗಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವರಾಜ ನಾಯ್ಕೋಡಿ ಇವರ ನೇತೃತ್ವದಲ್ಲಿ ಸಿಬ್ಬಂದಿ ಎಸ್.ಪಿ ಹುಣಸಿಕಟ್ಟಿ, ಆರ್.ಎಲ್ ಕಟ್ಟಿಮನಿ, ಎಸ್.ಎಸ್ ಕೊಂಡಿ, ಪಿ.ಕೆ ನಾಗರಾಳ, ಸಿ.ಡಿ ಕಲ್ಲೂರ ಇವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.




Leave a Reply

Your email address will not be published. Required fields are marked *

error: Content is protected !!