ಮಾಸ್ಕ್ ಹಾಕದಿದ್ದರೆ ಸಾವಿರ ರೂಪಾಯಿ ದಂಡ.. ಸುಲಿಗೆಗೆ ಮುಂದಾಯ್ತಾ ಸರ್ಕಾರ?

273

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಗರ ಪ್ರದೇಶದಲ್ಲಿ 1 ಸಾವಿರ, ಗ್ರಾಮೀಣ ಭಾಗದಲ್ಲಿ 500 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ ತಿಳಿಸಿದ್ದಾರೆ.

ಪೂರ್ತಿಯಾಗಿ ಮಾಸ್ಕ್ ಹಾಕದಿದ್ರೂ ದಂಡ ವಿಧಿಸಲಾಗುತ್ತದೆಯಂತೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಕರೋನಾ ಲಾಕ್ ಡೌನ್ ನಿಂದಾಗಿ ಈಗಾಗ್ಲೇ ಜನರು ಹೈರಾಣಾಗಿ ಹೋಗಿದ್ದಾರೆ. ಅನ್ ಲಾಕ್ ಪ್ರಕ್ರಿಯೆ ಶುರುವಾಗಿದ್ರೂ ಜನರ ಬಳಿ ಇನ್ನೂ ಸರಿಯಾದ ಆದಾಯವಿಲ್ಲ. ಇನ್ನು ಭಾರಿ ಮಳೆಯಿಂದಾಗಿ ಬೆಳೆಗಳು ಹಾಳಾಗ್ತಿವೆ. ಕೆಲಸವಿಲ್ಲ, ವ್ಯಾಪಾರ, ವಹಿವಾಟು ಸರಿಯಾಗಿ ನಡೆಯುತ್ತಿಲ್ಲ. ಹೀಗಿರುವಾಗ 500, 1000 ರೂಪಾಯಿ ದಂಡ ಅನ್ನೋದು ಸುಲಿಗೆ ಎನ್ನುತ್ತಿದ್ದಾರೆ.

ನಮ್ಮ ಅಧಿಕಾರಿಗಳಿಗೆ ದುಪ್ಪಟ್ಟು ದಂಡ ಅಂದ್ರೆ ಸಾಕಷ್ಟು ಖುಷಿ. ಯಾಕಂದ್ರೆ, ಜೇಬು ತುಂಬಿಸಿಕೊಳ್ಳಲು ಒಳ್ಳೆಯ ಅವಕಾಶ. ಹೀಗಾಗಿ ದಂಡದ ನೆಪದಲ್ಲಿ ಜನರಿಂದ ಹಣ ಸುಲಿಗೆಗೆ ನಿಂತು ಬಿಡುತ್ತಾರೆ. ಸಧ್ಯದ ಪರಿಸ್ಥಿತಿಯಲ್ಲಿ ದಂಡ ಅನ್ನದೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಕೇಳಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!