ಜೈಲ್ ಬರೋ ಚಳವಳಿ: ಪೊಲೀಸರ ವಶಕ್ಕೆ ಮಹಿಳೆಯರು

356

ಮಂಗಳೂರು: ದೇಶದಾದ್ಯಂತ ಮಹಿಳೆಯರ ಮೇಲೆ ಆಗ್ತಿರುವ ದೌರ್ಜನ್ಯ ಖಂಡಿಸಿ ಜೈಲ್ ಬರೋ ಚಳವಳಿ ನಡೆಸಿದ ಮಹಿಳೆಯರನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು, ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕಚೇರಿ ಎದುರು ಸೇರಿದ್ದ ನೂರಾರು ಮಹಿಳೆಯರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ರು. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಪದ್ಮಾವತಿ ಶೆಟ್ಟಿ, ಜಯಂತಿ ಬಿ.ಶೆಟ್ಟಿ ಸೇರಿದಂತೆ ನೂರಾರು ಮಹಿಳೆಯರನ್ನ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!