2020ರಲ್ಲಿ ಚಂದ್ರಯಾನ-3

598

ನವದೆಹಲಿ: ಭಾರತವು 2020ರಲ್ಲಿ ಚಂದ್ರಯಾನ-3 ಶುರು ಮಾಡಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಚಂದ್ರಯಾನ-3ರಲ್ಲಿ ಲ್ಯಾಂಡರ್ ಮತ್ತು ರೋವರ್ ಮೃದುವಾಗಿ ಲ್ಯಾಂಡ್ ಆಗಲಿವೆ ಅಂತಾ ಹೇಳಿದ್ದಾರೆ.

ಚಂದ್ರಯಾನ-2ದಲ್ಲಿ ನಾವು ಸೋತಿಲ್ಲ. ಇದ್ರಿಂದ ಸಾಕಷ್ಟು ಪಾಠಗಳನ್ನ ಕಲಿತಿದ್ದೇವೆ. ಅಮೆರಿಕ ಸೇರಿದಂತೆ ಅನೇಕ ದೇಶಗಳು ಒಂದೇ ಬಾರಿಗೆ ಸಕ್ಸಸ್ ಆಗಿಲ್ಲ. ಆದ್ರೆ, ನಮ್ಗೆ ಅಷ್ಟೊಂದು ಅವಕಾಶಗಳು ಬೇಕಾಗಿಲ್ಲ ಅಂತಾ ಭರವಸೆಯ ಮಾತುಗಳನ್ನಾಡಿದ್ದಾರೆ.

ಸೆಪ್ಟಂಬರ್ 7ರಂದು ಚಂದ್ರನನ್ನು ತಲುಪಲು 2.1 ಕಿಲೋ ಮೀಟರ್ ದೂರ ಇರುವಷ್ಟರಲ್ಲಿ ನಿಗದಿತ ಸ್ಥಳದಿಂದ ಕೇವಲ 500 ಮೀಟರ್ ಅಂತರದಲ್ಲಿ ವಿಕ್ರಂ ಲ್ಯಾಂಡರ್ ಕೈತಪ್ಪಿ ಹೋಯ್ತು. ವಿಕ್ರಂ ಲ್ಯಾಂಡ್ ಆಗುವ ವೇಳೆಯಲ್ಲಿ 21 ಭಾಗಗಳಾಗಿ ಬಿದ್ದಿತ್ತು ಅಂತಾ ನಾಸಾ ತಿಳಿಸಿತ್ತು.




Leave a Reply

Your email address will not be published. Required fields are marked *

error: Content is protected !!