ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ

386

ಹೈದ್ರಾಬಾದ್: ಇದು ನಿಮ್ಗೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದ್ರೂ ಇದು ಸತ್ಯ. 74 ವರ್ಷದ ವೃದ್ಧೆ ಅವಳಿ ಹಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ದೇಶದ ಮೊದಲ ಹಿರಿಯ ತಾಯಿ ಅನ್ನೋ ಪಾತ್ರಕ್ಕೆ ಒಳಗಾಗಿದ್ದಾರೆ.

ಆಂಧ್ರಪದೇಶದ ಗುಂಟೂರು ಜಿಲ್ಲೆಯ 74 ವರ್ಷದ ಎರ್ರಾಮುಟ್ಟಿ ಮಂಗಮ್ಮಾ ಅವಳಿ ಹೆಣ್ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ 80 ವರ್ಷದ ಪತಿ ಎರ್ರಾಮುಟ್ಟಿ ರಾಜಾರಾವ ದಂಪತಿ ಖುಷಿಯಾಗಿದ್ದಾರೆ. ಮಾರ್ಚ್ 22, 1962ರಲ್ಲಿ ಈ ಜೋಡಿ ಮದುವೆಯಾಗಿತ್ತು. ಆದ್ರೆ, ಇವರಿಗೆ ಮಕ್ಕಳಾಗಿರ್ಲಿಲ್ಲ. ಹೀಗಾಗಿ ಹತ್ತು ಹಲವು ವೈದ್ಯರನ್ನ ಸಂಪರ್ಕಿಸಿದ್ರೂ ಪ್ರಯೋಜನವಾಗಿರ್ಲಿಲ್ಲ.

ಹೀಗಿರುವಾಗ 2018 ನವೆಂಬರ್ ನಲ್ಲಿ ಅಂದ್ರೆ ತಮ್ಮ 73ನೇ ವಯಸ್ಸಿನಲ್ಲಿಯೂ ಗುಂಟೂರು ಸಮೀಪದ ಅಹಲ್ಯಾ ನರ್ಸಿಂಗ್ ಹೋಮ್ ನಲ್ಲಿರುವ ಡಾ.ಶಾನಾಕ್ಕಾಯಾಲಾ ಉಮಾಶಂಕರ ಅವರನ್ನ ಸಂಪರ್ಕಿಸಿದ್ರು. ಅವರು ಇದನ್ನ ಸವಾಲಾಗಿ ಸ್ವೀಕರಿಸಿದ್ರು.

ಮಂಗಮ್ಮಾಗೆ ಬಿಪಿ, ಶುಗರ್ ಹಾಗೂ ವಂಶವಾಹಿ ಯಾವುದೇ ಕಾಯಿಲೆ ಇರ್ಲಿಲ್ಲ. ಹೀಗಾಗಿ ಐವಿಎಫ್ ಮೂಲಕ ಮಗುವನ್ನ ಪಡೆಯಲು ಸಲಹೆ ನೀಡಿದ್ರು. ಅದು ಇದೀಗ ಫಲ ನೀಡಿದೆ. ವೃದ್ಧೆ ಮಂಗಮ್ಮಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!