ಸರಣಿ ಅಪಘಾತ: ಇಬ್ಬರ ಸಾವು, ಐವರಿಗೆ ಗಾಯ

338

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ತಾಲೂಕಿನ ಶರಣಸಿರಸಗಿ ಗ್ರಾಮದ ಹತ್ತಿರ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ಬೈಕ್ ಮೇಲೆ ತೆರಳುತ್ತಿದ್ದ ಅಜಯ ರೋಡಗಿ(29) ಹಾಗೂ ಪ್ರೇಮಾ ಪ್ರವೀಣ(27) ಮೃತರೆಂದು ತಿಳಿದು ಬಂದಿದೆ. ಇವರಿಬ್ಬರು ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದಾರೆ.

ಟೆಂಪೋ ಚಾಲಕ ಬೈಕ್ ಗೆ ಮೊದಲು ಗುದ್ದಿದ್ದಾನೆ. ಮತ್ತೆ ಕಾರೊಂದಕ್ಕೆ ಗುದ್ದಿದ್ದಾನೆ. ಇದ್ರಿಂದಾಗಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಕಾರು ತಗ್ಗು ಪ್ರದೇಶಕ್ಕೆ ಬಿದ್ದು ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!