ದರ್ಶನ್ ಬದುಕಲ್ಲಿ ಮತ್ತೆ ‘ಸುಂಟರಗಾಳಿ’

220

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್, ಕಾಟೇರ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದರ ನಡುವೆ ಅವರ ಸಂಸಾರಿಕ ಜೀವನದಲ್ಲಿ ಮತ್ತೊಮ್ಮೆ ಸುಂಟರಗಾಳಿ ಎದ್ದಿದೆ. ಈ ಹಿಂದೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಜಗಳ ತಾರಕಕ್ಕೆ ಹೋಗಿ ದೊಡ್ಡ ಸುದ್ದಿಯಾಗಿತ್ತು. ಈಗ ಪವಿತ್ರಾಗೌಡ ಎನ್ನುವ ಮಾಡೆಲ್ ವಿಚಾರಕ್ಕೆ ಸೋಷಿಯಲ್ ವಾರ್ ಶುರುವಾಗಿದೆ.

ಯೆಸ್, ಪವಿತ್ರಾಗೌಡ ಎನ್ನುವ ರೂಪದರ್ಶಿ ನಟ ದರ್ಶನ್ ಜೊತಗಿನ ಹಲವಾರು ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡು, ಇದಕ್ಕೆ ಒಂದು ದಶಕವಾಗಿದೆ. ನಮ್ಮ ಸಂಬಂಧಕ್ಕೆ 10 ವರ್ಷ. ಧನ್ಯವಾದಗಳು ಎಂದು ಬರೆದು ದರ್ಶನ್, ಮಗಳು ಖುಷಿಗೆ ಟ್ಯಾಗ್ ಮಾಡಿದ್ದಾರೆ. ಇದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯಲಕ್ಷ್ಮಿ ಸಹ ಪೋಸ್ಟ್ ಮಾಡಿದ್ದಾರೆ. ಬೇರೆಯೊಬ್ಬರ ಗಂಡನ ಫೋಟೋವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಜ್ಞಾನ ಇರಬೇಕು. ಅದು ಅವಳ ವ್ಯಕ್ತಿತ್ವ ಹಾಗೂ ನೈತಿಕದ ಬಗ್ಗೆ ಮಾತನಾಡುತ್ತದೆ. ವ್ಯಕ್ತಿ ವಿವಾಹಿತನಾಗಿದ್ದರೂ ಸಹ ತನ್ನ ವೈಯಕ್ತಿ ಹಿತಾಸಕ್ತಿಗಾಗಿ ಹತ್ತಿರವಾಗಿದ್ದಾಳೆ ಎಂದಿದ್ದಾರೆ. ಅಲ್ಲದೆ ಈ ಚಿತ್ರ ಸ್ಪಷ್ಟವಾಗಿದೆ, ಖುಷಿಗೌಡ ಪವಿತ್ರಾ ಮತ್ತು ಸಂಜಯ್ ಸಿಂಗ್ ಮಗಳು ಎನ್ನುವುದು. ನಮ್ಮ ವೈಯಕ್ತಿಕ ವಿಷಯಗಳಿಗಾಗಿ ನಾನು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಬೇಕಾದ ಸಮಯ ಬಂದಿದೆ. ಸಮಾಜದಲ್ಲಿ ಬೇರೆ ರೀತಿ ಬಿಂಬಿಸಲು ನೋಡುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!