ನಟಿ ಸಂಜನಾಗೆ ಮತ್ತೆ ಸಂಕಷ್ಟ

402

ಸ್ಯಾಂಡಲ್ ವುಡ್ ನಟಿ ಸಂಜನಾ ಒಂದಲ್ಲ ಒಂದು ಯಡವಟ್ಟುಗಳನ್ನ ಮಾಡಿಕೊಳ್ಳುತ್ತಲೇ ಇರ್ತಾಳೆ. ವಿವಾದ ಮಾಡ್ಬೇಕು ಅಂತಾ ಹೀಗೆ ಮಾಡ್ತಾಳೋ. ನಟಿಯ ವರ್ತನೆಯಿಂದ ಅದು ವಿವಾದವಾಗುತ್ತೋ ಗೊತ್ತಿಲ್ಲ. ಒಂದಲ್ಲ ಒಂದು ಕಾಂಟ್ರವರ್ಸಿ ಇರುತ್ತೆ.

ಇದೀಗ ಮತ್ತೊಂದು ಸಂಕಷ್ಟಕ್ಕೆ ನಟಿ ಸಂಜನಾ ಒಳಗಾಗಿದ್ದಾಳೆ. ಮಹೇಶಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ನೋಡಲು ಓಪನ್ ಕಾರಿನಲ್ಲಿ ಹೊರಟಿದ್ದಾಳೆ. ಹೀಗೆ ಸುಮ್ನೆ ಹೋದ್ರೆ ಏನೂ ಆಗ್ತಿರ್ಲಿಲ್ಲ. ಡ್ರೈವಿಂಗ್ ಮಾಡುತ್ತಲೆ ಫೋಟೋ ಕ್ಲಿಕ್ ಮಾಡಿದ್ದಾಳೆ. ಸಂಚಾರಿ ನಿಯಮ ಪಾಲಿಸಬೇಕಾದ ನಟಿ, ಒಂದು ಕೈಯನ್ನ ಸ್ಟೇರಿಂಗ್ ಮೇಲೆ, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಪೋಸ್ ಕೊಟ್ಟಿದ್ದು ಖಾಕಿ ಕಣ್ಣಿಗೆ ಬಿದ್ದಿದೆ. ಇದು ನಟಿ ಸಂಜನಾಗೆ ಸಂಕಷ್ಟ ತಂದಿದೆ.

ಇತ್ತೀಚೆಗಷ್ಟೇ ಬಾಲಿವುಡ್ ನಿರ್ಮಾಪಕಿಯ ಜೊತೆ ಬಾರ್ ವೊಂದರಲ್ಲಿ ಜಗಳ ಮಾಡಿಕೊಂಡಿದ್ದು ದೊಡ್ಡ ರಂಪಾಟವಾಗಿತ್ತು. ಆ ಘಟನೆ ಇನ್ನೂ ಹಸಿಬಿಸಿಯಾಗಿರುವ ನಡುವೆಯೇ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!