ಬ್ರೇಕಿಂಗ್ ನ್ಯೂಸ್
Search

ಜಾಹೀರಾತಿನಿಂದ ಸೆಲೆಬ್ರಿಟಿಗಳು ಬಳಸದ ಉತ್ಪನ್ನಗಳ ಬಗ್ಗೆ ದಾರಿ ತಪ್ಪಿಸಬಾರದು

221

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಇಂದು ಸಣ್ಣಪುಟ್ಟ ವಸ್ತುಗಳಿಂದ ಹಿಡಿದು ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳವರೆಗೂ ಜಾಹೀರಾತು ನೀಡಲಾಗುತ್ತೆ. ಇದಕ್ಕಾಗಿ, ಸಿನಿಮಾ, ಕ್ರೀಡಾ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಸಂಬಂಧ ಗ್ರಾಹಕರ ಸಂರಕ್ಷಣೆ ಕಾಯ್ದೆಗೆ ಅನುಸಾರವಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಸೆಲೆಬ್ರಿಟಿಗಳು ತಾವು ಬಳಸದೆ ಇರುವು ವಸ್ತುಗಳ ಕುರಿತು ಜಾಹೀರಾತಿನಲ್ಲಿ ಕಾಣಿಸಿಕೊಂಡು ಗ್ರಾಹಕರ ದಾರಿ ತಪ್ಪಿಸಬಾರದು, ಸರಳವಾದ, ಸ್ಪಷ್ಟವಾದ ಭಾಷೆಯಲ್ಲಿ ಅನುಮೋದನೆ ಮಾಡಬೇಕು. ಉತ್ಪನ್ನ ಹಾಗೂ ಸೇವೆಯ ಬಗ್ಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವವರು ಅದನ್ನು ಬಳಸಿರಬೇಕು ಹಾಗೂ ಅನುಭವಿಸರಬೇಕು. ಈ ಮೂಲಕ ಜನರ ದಾರಿ ತಪ್ಪಿಸದಂತೆ ಆಗುವುದಿಲ್ಲ.

ಎಂಡಾರ್ಸ್ ಮೆಂಟ್ಸ್ ನೋ ಹೌಸ್ ಅನ್ನೋ ಮಾರ್ಗಸೂಚಿಗಳ ಮೂಲಕ ಗ್ರಾಹಕರ ಸಂರಕ್ಷಣೆ ಕಾಯ್ದೆಯ ಪಾಲನೆ ಬಗ್ಗೆ ತಿಳಿಸಲಾಗಿದೆ. ಉತ್ಪನ್ನ ಹಾಗೂ ಸೇವೆ ಬಗ್ಗೆ ಗೊತ್ತಿಲ್ಲದೆ, ಅದನ್ನು ಬಳಸದೆ ಪ್ರೇಕ್ಷಕರಿಗೆ ಪ್ರಚೋದಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈಗಾಗ್ಲೇ ಕೆಲ ನಟ, ನಟಿಯರು ತಾವು ಬಳಸದ ವಸ್ತುಗಳ ಕುರಿತು ಜಾಹೀರಾತು ನೀಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿರುವುದು ಇಲ್ಲಿ ಗಮನಿಸಬಹುದು.




Leave a Reply

Your email address will not be published. Required fields are marked *

error: Content is protected !!