ಬಿಜೆಪಿಯಿಂದ ಇಂಡಿಯಾ ಒಕ್ಕೂಟ ವ್ಯಂಗ್ಯ ಮಾಡುವ ಜಾಹೀರಾತು

78

ಪ್ರಜಾಸ್ತ್ರ ಸುದ್ದ

ನವದೆಹಲಿ: ಇಂಡಿಯಾ ಒಕ್ಕೂಟವನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ಜಾಹೀರಾತು ಮಾಡಿರುವ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ಈ ಕುರಿತು ದೇಶ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ವಧು ನೋಡುವ ದೃಶ್ಯದಲ್ಲಿ ರಾಹುಲ್ ಗಾಂಧಿ, ಲಾಲು ಪ್ರಸಾದ್, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಅವರ ಪಾತ್ರಗಳಿದ್ದು, ಇದರಲ್ಲಿ ವರ ಯಾರು ಎನ್ನುವ ವಿಚಾರದಲ್ಲಿಯೇ ತಿಕ್ಕಾಟ ನಡೆಯುತ್ತದೆ. ಈ ಮೂಲಕ ಇಂಡಿಯಾ ಮೈತ್ರಿಕೂಟದಲ್ಲಿ ನಾಯಕತ್ವದ ಸಮಸ್ಯೆಯಿದೆ ಎಂದು ಹೇಳಲಾಗಿದೆ.

ಈ ಜಾಹೀರಾತು ವಿರುದ್ಧ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ವಾಗ್ದಾಳಿ ನಡೆಸಿದ್ದು, ಮಹಿಳೆಯರನ್ನು ಕೇವಲ ವೈವಾಹಿಕ ವಸ್ತು ಎಂಬಂತೆ ಬಿಂಬಿಸಲಾಗಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವವನ್ನು ಹಾಳು ಮಾಡುವ ಮನಸ್ಥಿತಿ ತೋರಿಸುತ್ತೆ ಎಂದಿದ್ದಾರೆ.

ಶಿವಸೇನೆ ನಾಯಕ ಪ್ರಿಯಾಂಕಾ ಚತುರ್ವೇದಿ, ಮಹಿಳೆಯರನ್ನು ಕೇವಲ ವರನನ್ನು ಹುಡುಕುವ ವಿಚಾರದಲ್ಲಿ ಕೇಂದ್ರಿಸಲಾಗಿದ್ದು, ರಾಜಕೀಯ ನಿರ್ಧಾರಗಳನ್ನು ಹೊರತುಪಡಿಸಿ ತೋರಿಸುವ ಮೂಲಕ ಅವಮಾನ ಮಾಡಲಾಗಿದೆ. ಇದೊಂದು ದುರದುಷ್ಟಕರ ಜಾಹೀರಾತು ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!