ಟ್ರಂಪ್ ಹೋದ್ಮೇಲೆ ಹೀಗಿವೆ ನೋಡಿ ಅಹಮದಾಬಾದ್ ರಸ್ತೆಗಳು

397

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಸಮೇತರಾಗಿ ಭಾರತಕ್ಕೆ ಎರಡು ದಿನ ಪ್ರವಾಸ ವೇಳೆ ಗುಜರಾತನ ಅಹಮದಾಬಾದ್, ಉತ್ತರ ಪ್ರದೇಶದ ಆಗ್ರಾ ಹಾಗೂ ದೆಹಲಿ ನಗರವನ್ನ ಫುಲ್ ಹೈ ಸೆಕ್ಯೂರಿಟಿಯಿಂದ ಕೂಡಿತ್ತು. ಇದ್ಕಿಂತ ಹೆಚ್ಚು ಸೌಂಡ್ ಮಾಡಿದ್ದ ಸ್ವಚ್ಛತೆ ವಿಷ್ಯ.

ಸರ್ದಾರ್ ವಲ್ಲಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗಿನ ರಸ್ತೆಯಲ್ಲಿ ಜಗಮಗ ಹೊಳೆಯುವಂತೆ ಮಾಡಲಾಗಿತ್ತು. ಸುಮಾರು 100 ಕೋಟಿ ಖರ್ಚು ಮಾಡಿ ನಗರವನ್ನ ಫಳಫಳ ಮಾಡಿದ್ರು. ಪಾಲಿಕೆಯವರು ನಾಯಿ, ಹಸು, ಎಮ್ಮೆಗಳನ್ನ ಈ ಪ್ರದೇಶದಿಂದ ಹೊರ ಹಾಕಿದ್ರು. ಟ್ರಂಪ್ ಹೋದ್ಮೇಲೆ ಮೂಕಪ್ರಾಣಿಗಳು ಮರಳಿ ತಮ್ಮ ಜಾಗಕ್ಕೆ ಬಂದಿವೆ. ಈಗ ನೋಡಿ ರಸ್ತೆ ಹೇಗಿವೆ ಎಂದು.

ಇದು ರಿಯಲ್ ರಸ್ತೆಗಳು. ಇಲ್ಲಿನ ಜನರ ಬದುಕು. ಅಮೆರಿಕ ಅಧ್ಯಕ್ಷರ ಸಲುವಾಗಿ ಈ ಭಾಗದ ಸಣ್ಣಪುಟ್ಟ ವ್ಯಾಪ್ಯಾರಿಗಳಿಗೆ, ಸ್ಲಂ ನಿವಾಸಿಗಳಿಗೆ ತೊಂದರೆ ಕೊಟ್ಟು ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಮೋದಿ ಸರ್ಕಾರ.




Leave a Reply

Your email address will not be published. Required fields are marked *

error: Content is protected !!