ಅಂಫನ್ ಚಂಡಮಾರುತಕ್ಕೆ 76 ಸಾವು: ವೈಮಾನಿಕ ಸಮೀಕ್ಷೆಗೆ ತೆರಳಿದ ಪಿಎಂ

548

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಅಂಫನ್ ಚಂಡಮಾರುತ ಅನಾಹುತ ಸೃಷ್ಟಿಸಿದೆ. ಈಗಾಗ್ಲೇ ಬಂಗಾಳದಲ್ಲಿ 70 ಮಂದಿ, ಒಡಿಶಾದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈಗಾಗ್ಲೇ ಕರೋನಾದಿಂದ ನಿದ್ದೆಗೆಟ್ಟಿರುವ ಜನಕ್ಕೆ ಅಂಫನ್ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

https://twitter.com/ANI/status/1263672883684892672?s=20

ಹೀಗಾಗಿ ಪ್ರಧಾನಿ ಮೋದಿ, ಅಂಫನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ಸಿದ್ಧರಾಗಿದ್ದು, ಬಂಗಾಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಈಗಾಗ್ಲೇ ಬಂಗಾಳದಲ್ಲಿ 20 ಹಾಗೂ ಒಡಿಶಾದಲ್ಲಿ 19 ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿವೆ. ಬಂಗಾಳಕ್ಕೆ ಹೆಚ್ಚುವರಿ ಇನ್ನು 4 ತಂಡಗಳನ್ನ ಕಳುಹಿಸಲು ನಿರ್ಧರಿಸಲಾಗಿದೆಯಂತೆ.

1 ಕೋಟಿ ಜನರ ಬದುಕಿಗೆ ಕೊಳ್ಳಿ:

ಅಂಫನ್ ಚಂಡಮಾರುತ ಗಂಟೆಗೆ 190-200 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತೆ. ಅಲ್ದೇ, ಅಬ್ಬರದ ಮಳೆಯಾಗುತ್ತೆ. ಸಮುದ್ರದಲ್ಲಿನ ಅಲೆಗಳು ಅಪಾಯದ ಮಟ್ಟದಲ್ಲಿ ಏರಿ ಸುತ್ತಲಿನ ಪ್ರದೇಶಗಳಿಗೆ ಹಾನಿ ಮಾಡುತ್ತೆ. ಇದ್ರಿಂದಾಗಿ ಬಂಗಾಳ ಹಾಗೂ ಒಡಿಶಾದಲ್ಲಿ 1 ಕೋಟಿ ಜನರ ಬದುಕು ಹೈರಾಣಾಗಿದೆ.




Leave a Reply

Your email address will not be published. Required fields are marked *

error: Content is protected !!