ಎಣ್ಣೆ ಪ್ರಿಯರೆ ಸ್ವಲ್ಪ ಇದನ್ನ ಓದಿ..

370

ನವದೆಹಲಿ: ಲಾಕ್ ಡೌನ್ ಆದ ದಿನಗಳಿಂದ ಅಗತ್ಯ ವಸ್ತುಗಳು ಹೊರತು ಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಅದರಲ್ಲೂ ಮದ್ಯ ಮಾರಾಟ ಬಂದ್ ಮಾಡಿರುವುದು ಎಣ್ಣೆ ಪ್ರಿಯರಿಗೆ ಎಲ್ಲಿಲ್ಲದ ಸಂಕಷ್ಟ ತಂದಿದೆ. ಮದ್ಯ ಸಿಗದಿರುವುದಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಂಡ ವರದಿ ಸಹ ಆದ್ವು. ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಮೇ 3ರ ಬಳಿಕವೂ ಮದ್ಯ ಸಿಗುವುದು ಡೌಟ್ ಎಂದು ಹೇಳಲಾಗ್ತಿದೆ. ಹೀಗಾಗಿ ಲಾಕ್ ಡೌನ್ ನಂತರವೂ ಎಣ್ಣೆ ಅಂಗಡಿಗಳು ಬಂದ್ ಆಗಿರಲಿವೆಯಂತೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, ಮದ್ಯ ಸೇವನೆಯಿಂದ ರೋಗ  ನಿರೋಧಕ ಶಕ್ತಿ ಕಡಿಮೆಯಾಗುತ್ತೆ. ಸಾಮಾಜಿಕ ಅಂತರ ಕಡಿಮೆಯಾಗುತ್ತೆ. ಇದ್ರಿಂದಾಗಿ ಕರೋನಾ ಹೆಚ್ಚಾಗುವ ಸಾಧ್ಯೆತೆಯಿದೆ ಎಂದಿದೆ. ಹೀಗಾಗಿ ಮೇ 3ರ ಬಳಿಕವೂ ದೇಶದಲ್ಲಿ ಸುರಪಾನ ಸಿಗುವ ಅನುಮಾನವಿದೆ.

ಎಣ್ಣೆಯಿಲ್ಲದೆ ಕಂಗಾಲಾಗಿರುವ ಕೆಲವರು, ಮದ್ಯದ ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಕೆಲವರು ಸಿಕ್ಕು ಬಿದ್ದಿದ್ದಾರೆ. ಕೆಲವರು ಸೂಸೈಡ್ ಮಾಡಿಕೊಂಡಿದ್ದಾರೆ. ಏನೆಯಾದ್ರೂ ಸಧ್ಯದ ಪರಿಸ್ಥಿತಿಯಲ್ಲಿ ನೋ ಡ್ರಿಂಕ್ಸ್ ಅಂತಿದೆ ಸರ್ಕಾರ.


TAG


Leave a Reply

Your email address will not be published. Required fields are marked *

error: Content is protected !!