‘ಬೆಕಿನಾಳ ‘ಗ್ರಾ.ಪಂ’ಯಲ್ಲಿ ಲಕ್ಷ ಲಕ್ಷ ಗುಳುಂ’: ಗ್ರಾಮಸ್ಥರಿಂದ ಪ್ರತಿಭಟನೆ

602

ಸಿಂದಗಿ: ತಾಲೂಕಿನ ಬೆಕಿನಾಳ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ಗ್ರಾಮಸ್ಥರು ತಾಲೂಕು ಪಂಚಾಯ್ತಿ ಎದುರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಬೆಕಿನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 7 ಗ್ರಾಮಗಳ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಜಯಕುಮಾರ ಚೌಧರಿ, ಪಿಡಿಒ ಬಸವರಾಜ ಶಹಾಪೂರ ಹಾಗೂ ಕಂಪ್ಯೂಟರ್ ಆಪರೇಟರ್ ಇರ್ಫಾನ ಆಲಗೂರ ಸೇರಿಕೊಂಡು 14ನೇ ಹಣಕಾಸು ಯೋಜನೆಯಲ್ಲಿ 35ರಿಂದ 40 ಲಕ್ಷ, ಎನ್ ಆರ್ ಜಿ ಕಾಮಗಾರಿಯಲ್ಲಿ 60 ರಿಂದ 70 ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ವೇಳೆ ಮಾತ್ನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ರಾಮನಗೌಡ ಬಿರಾದಾರ, 14ನೇ ಹಣಕಾಸು ಯೋಜನೆಯಲ್ಲಿ ಲಕ್ಷಾಂತಾರ ರೂಪಾಯಿ ಅವ್ಯವಹಾರ, 195 ಶೌಚಾಲಯ ನಿರ್ಮಾಣದಲ್ಲಿ ಗೋಲ್ ಮಾಲ್, ಚರಂಡಿ, ರಸ್ತೆ, ಲೈಟಿಂಗ್ ಕೆಲಸದಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ರು.

ಡಾ.ದಸ್ತಗೀರ ಮುಲ್ಲಾ ಮಾತ್ನಾಡ್ತಿರುವುದು

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತ್ನಾಡಿ, ಬೆಕಿನಾಳ ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ನೀತಿ ನಿಯಮವಿಲ್ಲ. ಇದೊಂದು ಕಳ್ಳರ ಸಂತೆ ಎಂದು ಕಿಡಿ ಕಾರಿದ್ರು. ತಾಲೂಕು ಪಂಚಾಯ್ತಿ ಅಧ್ಯಕ್ಷರು ಉಡಾಫೆ ಉತ್ತಾರೆ ಕೊಡ್ತಾರೆ. ಇಲ್ಲಿನ ಸಿಇಒ, ಇಒ ಸೇರಿದಂತೆ ಎಲ್ಲರೂ ಕಳ್ಳರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.

ಧರಣಿ ಸತ್ಯಾಗ್ರಹದಲ್ಲಿ ಬುರನಾಸಾಬ ಕಾಚಾಪುರ, ಹುಸೇನ ಪಟೇಲ ದಸ್ತಗೀರ, ಈಶುಗೌಡ ತರಕಳ್ಳಿ, ಕಿರಣರಾಜ, ಸಿದ್ದನಗೌಡ ಬಿರಾದಾರ, ಶಿವಣ್ಣ ತಿಳಗೋಳ, ಲಿಂಗಪ್ಪ ಲಿಂಗದಳ್ಳಿ, ಮಡಿವಾಳಪ್ಪ ಹೈಯಾಳ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!