‘ಬಿಜೆಪಿ ಸರ್ಕಾರದಿಂದಲೇ ನನ್ನ ಕ್ಷೇತ್ರಕ್ಕೆ 105 ಕೋಟಿ ಅನುದಾನ ರದ್ದು’

160

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸ್ವಪಕ್ಷೀಯ ನಾಯಕರ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಮಂಗಳವಾರ ಸದನದಲ್ಲಿ ಮತ್ತೊಮ್ಮೆ ಕಿಡಿ ಕಾರಿದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನನ್ನ ಕ್ಷೇತ್ರಕ್ಕೆ 105 ಕೋಟಿ ರೂಪಾಯಿ ಅನುದಾನ ತಡೆ ಹಿಡಿಯಲಾಯಿತು ಎನ್ನುವ ಮೂಲಕ ಮತ್ತೊಮ್ಮೆ ಮುಜುಗರ ತರುವ ಕೆಲಸ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನನ್ನ ಕ್ಷೇತ್ರಕ್ಕೆ 105 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದರು. ಆದರೆ ದುರದೃಷ್ಟವಶಾತ್ ಬಿಜೆಪಿ ಸರ್ಕಾರ ಬಂದು ಅದನ್ನು ತಡೆ ಹಿಡಿದು ರದ್ದುಗೊಳಿಸಲಾಯಿತು ಎಂದರು.

ಯಾರನ್ನಾದರೂ ಟಾರ್ಗೆಟ್ ಮಾಡಿದರೆ ಅವರು ಅಧಿಕಾರ ಕಳೆದುಕೊಳ್ಳುವುದನ್ನು ನೋಡಿದ್ದೇನೆ ಎನ್ನುವ ಮೂಲಕ ಬಿಎಸ್ವೈ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಉತ್ತರ ಕರ್ನಾಟಕದ ವಿಚಾರವಾಗಿ ಮಾತನಾಡುವಾಗ, ಆರ್.ಅಶೋಕ್ ವಿರೋಧ ಪಕ್ಷದ ನಾಯಕರಾಗಿದ್ದಕ್ಕೆ ಬೇಸರವಿಲ್ಲ. ಉತ್ತರ ಕರ್ನಾಟಕಕ್ಕೆ ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದು ಜನರಿಗೆ ಗೊತ್ತಾಗೈತಿ. ಪಾಪ ಆ ಸಿ.ಸಿ ಪಾಟೀಲರಿಗೆ ಪಬ್ಲಿಕ್ ಅಕೌಂಟ್ ದೊಂದು ಮಾಡಿ ಸಮಾಧಾನ ಮಾಡಿದಾರ. ಒಂದು ಉತ್ತರ ಕರ್ನಾಟಕ ಕೊಟ್ಟಂಗಾತು, ಒಂದು ಪಂಚಮಸಾಲಿಗೆ ಕೊಟ್ಟಂಗಾತು ಅಂತಾ ಅಶೋಕರು ಕ್ಯಾಲ್ಯೂಕೇಷನ್ ಮಾಡಿ, ಮ್ಯಾಗಿನವರ ಪರ್ಮಿಷನ್ ತಗೊಂಡಾರೊ ಬಿಟ್ಟಾರ ಗೊತ್ತಿಲ್ಲ. ಅವರು ಒಳಗೊಳಗೆ ಎಲ್ಲವನ್ನು ಮಾಡುತ್ತಾರೆ ಎನ್ನುವ ಮೂಲಕ ಮತ್ತೊಮ್ಮೆ ಅಸಮಾಧಾನ ಹೊರ ಹಾಕುವುದರೊಂದಿಗೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಲೇ ಇದ್ದಾರೆ.




Leave a Reply

Your email address will not be published. Required fields are marked *

error: Content is protected !!