ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಭಾನುವಾರ ನಿಧನ ಹೊಂದಿದ್ದಾಳೆ. ಕೋಲಾರ ಮೂಲದ 22 ವರ್ಷದ ವಿದ್ಯಾರ್ಥಿನಿ ಶಿಲ್ಪಾ ಮೃತ ದುರ್ದೈವಿ.
ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ಹತ್ತಿರ ಅಕ್ಟೋಬರ್ 10ರಂದು ಬಿಎಂಟಿಸಿ ಬಸ್ ಹತ್ತುವಾಗ ಕೆಳಗೆ ಬಿದ್ದಿದ್ದಳು. ಆಗ ಬಸ್ ಆಕೆಯ ಮೇಲೆ ಹರಿದಿತ್ತು. ಗಂಭೀರ ಗಾಯಗೊಂಡಿದ್ದ ಶಿಲ್ಪಾ ಬನ್ನೇರುಘಟ್ಟದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾಳೆ.