ತೆಲುಗಿಗೆ ಡಬ್ ಆದ ಕನ್ನಡದ ‘ಚಮಕ್’ ಸಿನಿಮಾ ಒಂದೇ ದಿನದಲ್ಲಿ ಒಂದು ಮಿಲಿಯನ್ ವೀಕ್ಷಕರು ನೋಡಿದ್ದಾರೆ. ತೆಲುಗಿನಲ್ಲಿ ‘ಗೀತಾ ಚಲೋ’ ಹೆಸರಿನಲ್ಲಿ ಮೂವಿ ರಿಲೀಸ್ ಆಗಿದೆ.
ಕನ್ನಡದ ಮೂವಿಯೊಂದು ಡಬ್ ಆದ ಒಂದೇ ದಿನಲ್ಲಿ ಯೂಟ್ಯೂಬ್ ನಲ್ಲಿ ಇಷ್ಟೊಂದು ವೇಗವಾಗಿ ಒಂದು ಮಿಲಿಯನ್ ವೀಕ್ಷಕರನ್ನ ದಾಟಿದ್ದು ಇದೇ ಮೊದ್ಲು ಅಂತಾ ಹೇಳಲಾಗ್ತಿದೆ.
ವೋಲ್ಗಾ ವಿಡಿಯೋ ಅನ್ನೋ ಸಂಸ್ಥೆ ಯೂಟ್ಯೂಬ್ ನಲ್ಲಿ ಸಿನಿಮಾಗಳನ್ನ ರಿಲೀಸ್ ಮಾಡುತ್ತೆ. ಆ ಸಂಸ್ಥೆಯಿಂದ ರಿಲೀಸ್ ಆದ ಗೀತಾ ಚಲೋ ಹೊಸ ದಾಖಲೆ ಬರೆದಿದೆ.