ಸ್ಲಿಮ್ ಮಾಡುತ್ತೆ ಸೂರ್ಯಕಾಂತಿ ಬೀಜ!

1533

ದೇಹದ ತೂಕವನ್ನ ಇಳಿಸಲು ಜನರು ಸಾಕಷ್ಟು ಪ್ರಯೋಗಗಳನ್ನ ಮಾಡ್ತಾರೆ. ವಾಕಿಂಗ್, ಜಿಮ್, ಡಯಟ್ ಸೇರಿದಂತೆ ಹತ್ತು ಹಲವು ರೀತಿಗಳಿಂದ ಟ್ರೈ ಮಾಡ್ತಾರೆ. ಆದ್ರೂ ಸ್ಲಿಮ್ ಆಗ್ಲಿಲ್ಲ ಅನ್ನೋ ಚಿಂತೆ. ಅಂತವರಿಗೆ ಇಲ್ಲೊಂದು ಟಿಪ್ಸ್ ಇದೆ.

ಸೂರ್ಯಕಾಂತಿ ಬೀಜ ನಿಮ್ಮ ಕೊಬ್ಬನ್ನು ಕರಗಿಸುವುಲ್ಲಿ ಸಹಾಯ ಮಾಡುತ್ತೆ. ಇದರ ಬೀಜದ ಒಳಗಡೆಯಿರುವ ಬೆಳ್ಳನೆಯ ತಿರುಳಿನಲ್ಲಿ ಪೈಟೋಕೆಮಿಕಲ್ ಅಂಶವಿದೆ. ಇದು ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶಕ್ತಿ ಇದ್ದು, ಹಾರ್ಟ್ ಸಂಬಂಧಿ ರೋಗಗಳಿಂದಲೂ ದೂರ ಇರುವಂತೆ ಮಾಡುತ್ತೆ. ಇಷ್ಟು ಮಾತ್ರವಲ್ಲ ಇದರಲ್ಲಿರುವ ನಾರಿನಂಶದಿಂದ ಜೀರ್ಣಕ್ರಿಯಗೆ ಸಹಾಯವಾಗುತ್ತೆ.

ಇನ್ನೊಂದು ವಿಶೇಷ ಅಂದ್ರೆ ಸೂರ್ಯಕಾಂತಿ ಬೀಜದಲ್ಲಿರುವ ಫಾಲೆಟ್ ಅನ್ನೋ ಅಂಶದಿಂದ ಮಹಿಳೆಯರ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತೆ. ಮೊಸರು, ಸಲಾಡ್ ಹಾಗೂ ಜ್ಯೂಸ್ ನಲ್ಲಿ ಹಾಕಿಕೊಂಡು ಇದನ್ನ ಸೇವನೆ ಮಾಡಬಹುದು.




Leave a Reply

Your email address will not be published. Required fields are marked *

error: Content is protected !!