ಪಾಂಡವಪುರದಲ್ಲಿ ಕರೋನಾ ಜಾಗೃತಿ ಸಭೆ

392

ಮಂಡ್ಯ: ಪಾಂಡವಪುರ ಪಟ್ಟಣದ ಮಿನಿ‌ವಿಧಾನಸೌಧದ ಆವರಣದಲ್ಲಿ ಕರೋನಾ ವೈರಸ್ ಜಾಗೃತ ಸಭೆ ನಡೆಸಲಾಯ್ತು. ತಹಶೀಲ್ದಾರ್ ಪ್ರಮೋದ ಎಲ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ ಎ ಅರವಿಂದ ಮಾತ್ನಾಡಿ, ಯಾವುದೇ ವ್ಯಕ್ತಿ ಶೀನುವುದು, ಕೆಮ್ಮುವುದು, ಅತಿಯಾದ ಜ್ವರ ಬರುವುದು, ಗಂಟಲಲ್ಲಿ ಉಸಿರಾಟದ ತೊಂದರೆ, ತಲೆನೋವು ಬರುವುದು ಕರೋನಾ ರೋಗದ ಲಕ್ಷಣವಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ  ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಸಿಡಿಪಿಒ ನಟರಾಜು, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ಕೃಷಿ ಅಧಿಕಾರಿ ಎಚ್.ವಿ.ಜಗದೀಶ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಸೀರ ಹುಸೇನ, ಪಿಎಸ್ಎಸ್ ಕೆ‌ ನೌಕರರ ಸಂಘದ ಅಧ್ಯಕ್ಷ ಹಿರೇಮರಳಿ ರಾಜಶೇಖರ, ಮಹಿಳಾ ಸಾಂತ್ವನ ಕೇಂದ್ರದ ಚಂದ್ರಿಕಾ ಸೇರಿ ಅನೇಕರು ಭಾಗವಹಿಸಿದ್ರು. ಇದೇ ವೇಳೆ ಕರೋನಾ ವೈರಸ್ ಕುರಿತ ಜಾಗೃತಿ ಮೂಡಿಸುವ ಕರ ಪತ್ರ ಬಿಡುಗಡೆ ಮಾಡಲಾಯಿತು.




Leave a Reply

Your email address will not be published. Required fields are marked *

error: Content is protected !!