ಡೆಡ್ಲಿ ಕರೋನಾ: ಭಾರತ ಟಾಪ್ 6.. ಕರ್ನಾಟಕ ಟಾಪ್ 9

357

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 9,971 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 2,47,040 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ 6,946 ಜನರು ಸಾವನ್ನಪ್ಪಿದ್ದಾರೆ.

ಇದುವರೆಗೂ 1,19,283 ಜನರು ಗುಣಮುಖರಾಗಿದ್ದಾರೆ. 1,20,801 ಸೋಂಕಿತ ಪ್ರಕರಣಗಳು ಚಾಲ್ತಿಯಲ್ಲಿವೆ. ಇದರೊಂದಿಗೆ ಭಾರತ ಇದೀಗ ವಿಶ್ವದಲ್ಲಿ ಟಾಪ್ 6ಗೆ ಬಂದು ನಿಂತಿದೆ. ಅಮೆರಿಕ, ಬ್ರೆಜಿಲ್, ರಷ್ಯ, ಸ್ಪೇನ್, ಯುಕೆ ಟಾಪ್ 5ನೇ ಸ್ಥಾನದಲ್ಲಿವೆ.

ಇನ್ನು ದೇಶದ ವಿಚಾರದಲ್ಲಿ ಬಂದ್ರೆ ಮಹಾರಾಷ್ಟ್ರ ಟಾಪ್ 1ನಲ್ಲಿದ್ದು, ಲಕ್ಷದ ಸಮೀಪ ಸೋಂಕಿತರ ಸಂಖ್ಯೆ ಬಂದು ತಲುಪಿದೆ.

ನಂಬರ್ ರಾಜ್ಯ ಸೋಂಕು ಸಾವು
01 ಮಹಾರಾಷ್ಟ್ರ 82,968 2,969
02 ತಮಿಳುನಾಡು 30,152 251
03 ದೆಹಲಿ 27,654 761
04 ಗುಜರಾತ 19,617 1,219
05 ರಾಜಸ್ತಾನ 10,385 234
06 ಉತ್ತರ ಪ್ರದೇಶ 10,103 268
07 ಮಧ್ಯಪ್ರದೇಶ 9,228 399
08 ಪಶ್ಚಿಮ ಬಂಗಾಳ 7,738 383
09 ಕರ್ನಾಟಕ 5,213 59
10 ಆಂಧ್ರಪ್ರದೇಶ 4,510 73

ಇಷ್ಟು ದಿನ ಟಾಪ್ 10 ಲಿಸ್ಟ್ ನಿಂದ ಆಚೆಯಿದ್ದ ಕರ್ನಾಟಕ 9ನೇ ಸ್ಥಾನಕ್ಕೆ ಬಂದಿದೆ. ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಕರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದನ್ನ ನೋಡ್ತಿದ್ರೆ, ಇನ್ನು ಮೇಲಿನ ಸ್ಥಾನಕ್ಕೆ ಹೋಗುವ ಆತಂಕ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!