ಸಿಂದಗಿಯಲ್ಲಿ ಮತ್ತೆ 12 ಜನರಲ್ಲಿ ಸೋಂಕು

1245

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಮತ್ತೆ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರನ್ನ ಈಗಾಗ್ಲೇ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರುಟಗಿ ಎಲ್ ಟಿ ಗ್ರಾಮದಲ್ಲಿ 10 ಹಾಗೂ ಬೆಕಿನಾಳದಲ್ಲಿ 2 ಕೋವಿಡ್ 19 ಸೋಂಕು ದೃಢಪಟ್ಟಿವೆ. ನಿನ್ನೆ ಈ ಬಗ್ಗೆ ವರದಿ ಬಂದಿದ್ದು, ಈ 12 ವರದಿಗಳು ಇಂದು ಸಂಜೆ ಬರುವ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾಗಲಿವೆ.

ಇನ್ನು ಇದುವರೆಗೂ ತಾಲೂಕಿನಲ್ಲಿ 42 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 30 ಜನರು ಗುಣಮುಖರಾಗಿದ್ದಾರೆ. ಈ ಎಲ್ಲ ಪ್ರಕರಣಗಳು ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿವೆ. ಇದರ ನಡವೆ ಆತಂಕದ ಸಂಗತಿ ಅಂದ್ರೆ, ಸೋಂಕು ಕಾಣಿಸಿಕೊಂಡ ಬಹುತೇಕ ರೋಗಿಗಳಲ್ಲಿ ಕರೋನಾ ಲಕ್ಷಣಗಳೇ ಇಲ್ಲದಿರುವುದು.

ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕರೋನಾ ಅಂದ್ರೆ ಭಯ ಪಡುವುದಲ್ಲ. ಹಾಗಂತ ಅದನ್ನ ನಿರ್ಲಕ್ಷ್ಯ ಮಾಡಿ ಬೇಕಾಬಿಟ್ಟಿಯಾಗಿ ತಿರುಗಾಡುವುದು, ಜನರೊಂದಿಗೆ ಬೆರೆಯುವುದು ಮಾಡುವುದಲ್ಲ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಟೈಸರ್ ಬಳಕೆ ಸದಾ ಮಾಡುವ ಮೂಲಕ ಕೋವಿಡ್ 19 ಸೋಂಕಿನಿಂದ ದೂರ ಇರಬೇಕಿದೆ.




Leave a Reply

Your email address will not be published. Required fields are marked *

error: Content is protected !!