‘ಮಂಡ್ಯ ಕರೋನಾ ಸೋಂಕಿನ ಹಿಂದೆ ರಾಜಕೀಯ ಹುನ್ನಾರ’

282

ಮಂಡ್ಯ: ಹಸಿರು ಝೋನ್ ನಲ್ಲಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ಪ್ರಕರಣದಿಂದ, ಸೋಂಕು ಹರಡುವ ರಾಜಕೀಯ ಹುನ್ನಾರ ನಡೆದಿದೆ ಎಂದು ಶಾಸಕ ಸಿ.ಎಸ್ ಪುಟ್ಟರಾಜು ಆರೋಪಿಸಿದ್ದಾರೆ. ತಾಲೂಕು ಆಡಳಿತ ಕೋವಿಡ್ 19 ತಡೆಯಲು ಎಲ್ಲ ಕ್ರಮಗಳನ್ನ ಅನುಸರಿಸಿದೆ ಎಂದರು.

ಈಗಾಗಲೇ ಪ್ರಥಮ‌ ಹಂತದಲ್ಲಿ 27 ಹಾಗೂ ದ್ವಿತೀಯ ಹಂತದಲ್ಲಿ 60 ಮಂದಿಗೆ ಕರೋನಾ ಪರೀಕ್ಷೆ ನಡೆಸಿದ್ದು ಎಲ್ಲವೂ ನೆಗೆಟಿವ್ ಬರಲಿ ಎಂದು ದೇವರಲ್ಲಿ ‌ಪ್ರಾರ್ಥಿಸುತ್ತೇನೆ. ಮುಂಬೈಯಿಂದ ಬಿ.ಕೊಡಗಹಳ್ಳಿಯ 53 ವರ್ಷದ ವ್ಯಕ್ತಿಯ ಶವ ತಂದ ವೇಳೆ ಆತಂಕ ಎದುರಾಗಿತ್ತು. ಗಡಿಯಲ್ಲಿ ತಾಲೂಕು ಆಡಳಿತ ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದರಿಂದ ಗಂಡಾಂತರ ತಪ್ಪಿದೆ ಎಂದು ಶಾಸಕ ಸಿ.ಎಸ್ ಪುಟ್ಟರಾಜು ಹೇಳಿದ್ರು.

ಜನತೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಬಿ.ಕೊಡಗಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಶೀಲ್ ಡೌನ್ ಮಾಡಿದ್ದು, ತಾವು ವೈಯಕ್ತಿಕವಾಗಿ ಗ್ರಾಮದ ಪ್ರತಿ ಮನೆಗೆ ಆಹಾರ ಕಿಟ್ ಹಾಗೂ ತರಕಾರಿ ಕಿಟ್ ವಿತರಿಸುತ್ತೇನೆ ಎಂದರು. ಈ ವೇಳೆ ಎಸಿ ಶೈಲಜಾ, ತಹಶೀಲ್ದಾರ್ ಪ್ರಮೋದ ‌ಎಲ್.ಪಾಟೀಲ, ಇಒ ಮಹೇಶ, ಟಿಎಚ್ ಒ ಡಾ.ಸಿ.ಎ.ಅರವಿಂದ, ಪೊಲೀಸ್ ಇನ್ಸ್ ಪೆಕ್ಟರ್ ಸಿ.ಎಂ.ರವೀಂದ್ರ, ಮೇಲುಕೋಟೆ ಸಬ್ ಇನ್ಸ್ ಪೆಕ್ಟರ್ ಚಿದಾನಂದ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!