ಸಿಂದಗಿಯಲ್ಲಿ ಮೃತದೇಹ ಪತ್ತೆ

654

ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್

ಸಿಂದಗಿ: ಪಟ್ಟಣದ ಹಳೆ ಪೊಲೀಸ್ ಠಾಣೆ ರಸ್ತೆ ಸಂಪರ್ಕಿಸುವ ಬೃಹತ್ ಚರಂಡಿಯಲ್ಲಿ ಮೃತದೇಹಪತ್ತೆಯಾಗಿದೆ. ಬಮನಿಂಗಪ್ಪನ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಶನಿವಾರ ಸಂಜೆ ಮೃತದೇಹ ಪತ್ತೆಯಾಗಿದೆ.

ಕೆಸರಿನಲ್ಲಿ ಮೃತದೇಹ ಮುಚ್ಚಿ ಹೋಗಿರುವುದರಿಂದ ಕಾಲು ಮಾತ್ರ ಕಾಣುತ್ತಿದೆ. ಹೀಗಾಗಿ ಪುರುಷ ಹಾಗೂ ಮಹಿಳೆಯ ಮೃತದೇಹ ಅನ್ನೋದು ಇನ್ನು ತಿಳಿದು ಬಂದಿಲ್ಲ. ಸರಿಯಾಗಿ ನೀರು ಹೋಗದ ಕಾರಣ ಸ್ಥಳೀಯರೊಬ್ಬರು ಸ್ವಚ್ಛಗೊಳಿಸಲು ಹೋದ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದೆ.

ಇನ್ನು ಇದರ ಹಿನ್ನೆಲೆ ಏನು ಇರಬಹುದು ಅನ್ನೋ ಹಲವು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!