ಕುರಿ ಕಾಯುತ್ತಿದ್ದ ಹುಡುಗ ಡೆಲ್ಲಿ ಕ್ಯಾಪಿಟಲ್ ಫಿನಿಶರ್

224

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಕ್ರಿಕೆಟ್ ಟೂರ್ನಿ ಭರ್ಜರಿಯಾಗಿ ನಡೆಯುತ್ತಿದೆ. ಇದರಲ್ಲಿ ಸಾಕಷ್ಟು ಹೊಸ ಹೊಸ ಮುಖಗಳು ಮಿಂಚುತ್ತಿವೆ. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ರೊವ್ಮನ್ ಪೊವಲ್. ಈತ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 35 ಎಸೆತಗಳಲ್ಲಿ 67 ರನ್ ಭಾರಿಸಿ ಗೆಲುವು ತಂದು ಕೊಟ್ಟ.

ವೆಸ್ಟ್ ಇಂಡೀಸ್ ಮೂಲದ ಆಟಗಾರ ಐಪಿಎಲ್ ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಡೆಲ್ಲಿ ಕ್ಯಾಪ್ಟನ್ ರಿಷಬ್ ಪಂತ್, ಕೋಚ್ ಮಾತು ಕೇಳಿ ಪೊವಲ್ ಗೆ ಅವಕಾಶ ನೀಡಿದರು. ಇದನ್ನು ಅವರು ಫ್ರೂವ್ ಮಾಡಿ ತೋರಿಸಿದರು. ಇಂತಹ ಆಟಗಾರನ ಕಥೆ ಕಣ್ಣೀರಿನಿಂದ ಕೂಡಿದೆ.

ಗರ್ಭಿಣಿ ತಾಯಿಯನ್ನು ಬಿಟ್ಟು ಹೋದ ತಂದೆಯ ಬಗ್ಗೆ ಪೊವಲ್ ಗೆ ಗೊತ್ತಿಲ್ಲ. ತಾಯಿ ಜೋನ್ ಪ್ಲಮ್ಮರ್ ಅವರಿವರ ಮನೆಯಲ್ಲಿ ಬಟ್ಟೆ, ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದಳು. ಈತನಿಗೆ ಸಹೋದರಿಯೊಬ್ಬಳು ಇದ್ದಾಳೆ. ಅವರಿಬ್ಬರೆ ಈತನ ಸರ್ವಸ್ವ.

ಜುಮೈಕಾದ ಸಣ್ಣ ಸಮುದಾಯದಲ್ಲಿ ಬೆಳೆದ ಪೊವನ್, ಸಣ್ಣದಾದ ಮನೆಯಲ್ಲಿ ಬೆಳೆದ. ಅದು ಮಳೆ ಬಂದರೆ ಸೋರುತಿತ್ತು. ಚಿಕ್ಕ ವಯಸ್ಸಿನಲ್ಲಿ ಕೆಲಸ ಮಾಡಲು ಶುರು ಮಾಡಿದ. ಕುರಿ ಮೇಯಿಸುತ್ತಾ ಶಾಲೆ ಕಲಿತ. 6ನೇ ತರಗತಿಯಲ್ಲಿರುವಾಗ ಶಿಕ್ಷಕ ನೊಕೊಲಾಸ್ ಧಿಲ್ಹಾನ್ ಗೆ ಗಾಡ್ ಫಾದರ್ ಆದರು. ಇಂತಹ ಪೊವೆಲ್ ದಿನಗಳು ಕಳೆದಂತೆ ಕ್ರಿಕೆಟ್ ನತ್ತ ಆಸಕ್ತಿ ತೋರಿಸಿ ಭರ್ಜರಿ ಬ್ಯಾಟಿಂಗ್ ಮಾಡುವುದನ್ನು ಕಲಿತ. ಇಂತಹ ಹುಡುಗ ಇಂದು ಡೆಲ್ಲಿ ಕ್ಯಾಪಿಟಲ್ ತಂಡದ ಫಿನಿಶರ್ ಆಗಿದ್ದು ನಿಜಕ್ಕೂ ರೋಚಕ.




Leave a Reply

Your email address will not be published. Required fields are marked *

error: Content is protected !!