ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಬಾಲಿವುಡ್ ಅಂಗಳದಲ್ಲಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗ್ಲೇ ಖ್ಯಾತ ನಟ, ನಟಿ, ನಿರ್ದೇಶಕ, ನಿರ್ಮಾಪಕರ ವಿಚಾರಣೆ ನಡೆಸಲಾಗಿದೆ. ಈಗ ಹಾಸ್ಯ ನಟಿ ಭಾರತಿ ಸಿಂಗ್ ಸರದಿ.
ನಟ ಸುಶಾಂತ ಸಿಂಗ್ ರಾಜಪೂತ್ ಸಾವಿನ ಬಳಿಕ ಡ್ರಗ್ಸ್ ತನಿಖೆ ಜೋರಾಗಿದೆ. ಇದೀಗ ನಟಿ ಭಾರತಿ ಸಿಂಗ್, ಪತಿ ಹರ್ಷಾ ಡ್ರಗ್ಸ್ ಸೇವನೆ ಮಾಡ್ತಾರೆ ಅನ್ನೋ ಅನುಮಾನದ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಪರಿಶೀಲನೆ ನಡೆಸ್ತಿದ್ದು, ಮಾಹಿತಿ ಹೊರ ಬೀಳಬೇಕಿದೆ. ಇನ್ನು ನಟಿ ಭಾರತಿ ಸಿಂಗ್ ಕನ್ನಡದ ರಂಗನ್ ಸ್ಟೈಲ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.