ಮುಂಬೈನಲ್ಲಿ ಭಾರೀ ಬೆಂಕಿ ಅನಾಹುತ

354

ಮುಂಬೈ: ನಗರದ ಬೈಕುಲಾದಲ್ಲಿರುವ ಮುಸ್ತಫಾ ಬಜಾರ್ ನಲ್ಲಿರುವ ಮರದ ಡಿಪೋವೊಂದರಲ್ಲಿ ಇಂದು ಬೆಳಗಿನ ಜಾವ ಬೆಂಕಿ ಅವಗಡ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವುದ್ರಿಂದ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಈ ಘಟನೆಯಲ್ಲಿ ಯಾವುದೇ ಸಾವು ನೋವು ಆಗಿರುವುದರ ಬಗ್ಗೆ ಇದುವರೆಗೂ ಮಾಹಿತಿ ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಚರಣೆ ಭರದಿಂದ ಸಾಗಿದೆ. ಮುಂಬೈ ನಗರದಲ್ಲಿ ಪದೆಪದೆ ಬೆಂಕಿ ಅನಾಹುತವಾಗ್ತಿರುವುದಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ತಿಂಗಳು ಅಂಧೇರಿಯಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಆಗ 84 ಜನರನ್ನ ರಕ್ಷಿಸಲಾಗಿತ್ತು. 2018 ಡಿಸೆಂಬರ್ ನಲ್ಲಿ ಇಎಸ್ಐಸಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಗಡದಲ್ಲಿ 10 ಜನ ಪ್ರಾಣ ಕಳೆದುಕೊಂಡಿದ್ರು. ಬರೋಬ್ಬರಿ 175 ಜನ ಗಾಯಗೊಂಡಿದ್ರು. ಇನ್ನು 2017 ಡಿಸೆಂಬರ್ ನಲ್ಲಿ ರೂಫ್ ಟಾಪ್ ಪಬ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ 14 ಜನ ಪ್ರಾಣ ಕಳೆದುಕೊಂಡಿದ್ರು.




Leave a Reply

Your email address will not be published. Required fields are marked *

error: Content is protected !!