1 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಆಹಾರದ ಕಿಟ್

333

ನಾಗಮಂಗಲ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಜಿಲ್ಲೆಯ 1 ಲಕ್ಷದ 2 ಸಾವಿರ ಹಾಲು ಉತ್ಪಾದಕರಿಗೆ ಹಾಗೂ ಅದರ ಭಾಗವಾಗಿ ನಾಗಮಂಗಲ ತಾಲೂಕಿನ 14 ಸಾವಿರ ಹಾಲು ಉತ್ಪಾದಕರ ಆಹಾರ ಕಿಟ್ ನೀಡಲು ಮುಂದಾಗಿದೆ.

ಆಹಾರ ಕಿಟ್ ವಿತರಣೆಗೆ ಕಾರ್ಯಕ್ಕೆ ತಾಲೂಕಿನ ಬಿಳಗುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಆವರಣದಲ್ಲಿ ಶಾಸಕ ಸುರೇಶಗೌಡ ಹಾಗೂ ಎಂಎಲ್ ಸಿ ಅಪ್ಪಾಜಿಗೌಡ ಮತ್ತು ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿ ರವಿರವರು ಚಾಲನೆ ನೀಡಿದರು.

ಪ್ರಪ್ರಥಮ ಬಾರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಜಿಲ್ಲೆಯ 1 ಲಕ್ಷದ 2 ಸಾವಿರ ಹಾಲು ಉತ್ಪಾದಕರಿಗೆ ಹಾಗೂ ನಾಗಮಂಗಲ ತಾಲೂಕಿನ 14 ಸಾವಿರ ಹಾಲು ಉತ್ಪಾದಕರ ಆಹಾರ ಕಿಟ್ ಪದಾರ್ಥಗಳನ್ನು ನೀಡಲಾಗುವುದು ಎಂದು ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ಕೋಟಿ ರವಿ ತಿಳಿಸಿದರು.

ಜಿಲ್ಲೆಯಲ್ಲಿ 1,250 ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು 97 ಸಾವಿರ ಹಾಲು ಉತ್ಪಾದಕರು ಮತ್ತು 5 ಸಾವಿರ ಸಿಬ್ಬಂದಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದ್ದು ತಿಳಿಸಿದರು. ಆಯಾ ತಾಲೂಕಿನ ನಿರ್ದೇಶಕರ ಸಮ್ಮುಖದಲ್ಲಿ ಹಾಲು ಉತ್ಪಾದಕರಿಗೆ ಆಹಾರ ಧಾನ್ಯದ ಕಿಟ್  ವಿತರಿಸಲಾಗುತ್ತದೆ ಎಂದರು. ಈ ವೇಳೆ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘ ಮತ್ತು ತಾಲೂಕು ಆಡಳಿತ ವರ್ಗ, ಹಾಲಿನ ಡೈರಿ ನಿರ್ದೇಶಕರುಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!