ಹರ್ಷ ಹತ್ಯೆ ಕೇಸ್: ಸಿಂದಗಿಯಲ್ಲಿ ಹಿಂದುಪರ ಸಂಘಟನೆಗಳ ಪ್ರತಿಭಟನೆ

308

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶಿವಮೊಗ್ಗದ ಕೋಟೆ ಪ್ರಖಂಡ ಭಜರಂಗದಳ ಸಹ ಸಂಯೋಜಕ ಹರ್ಷ ಹತ್ಯೆ ಖಂಡಿಸಿ ಪಟ್ಟಣದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಆಜಾದ್ ಯುವ ವೇದಿಕೆ ಸೇರಿ ವಿವಿಧ ಹಿಂದುಪರ ಸಂಘಟನೆಗಳಿಂದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಅಶೋಕ ನೇಗಿನಾಳ, ವಿನೋದ ಬಡಿಗೇರ, ನಿಂಗಣ್ಣ ಬಗಲಿ ಸೇರಿದಂತೆ ಇತರರ ಮಾತನಾಡಿ, ಹರ್ಷ ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದರ ಹಿಂದೆ ಪಿತೂರಿ ಇದೆ. ಕೂಡಲೇ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.

ಕಳೆದ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಹಿಂದುಗಳ ಹತ್ಯೆಯಾಗುತ್ತಿದೆ. ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವಿಎಚ್ ಪಿ ಅಧ್ಯಕ್ಷ ಡಾ.ಶರಣಗೌಡ ಬಿರಾದಾರ, ಭಜರಂಗದಳದ ಯಮನಪ್ಪ ಚೌಧರಿ, ರಾಜು ಪಾಟೀಲ, ಪ್ರಶಾಂತ ಬಗಲಿ, ರಮೇಶ ಬ್ಯಾಕೋಡ, ಬಸವರಾಜ ಬಿರಾದಾರ, ಲಕ್ಷ್ಮಣ ಹೂಗಾರ, ಅನೀಲ ಗುಡ್ಡ್ಯಾಳ, ನೀಲಕಂಠ ರಬಿಶೇಖ, ಅಮೋಗಿ ಹರವಾಳ, ಬಸವರಾಜ ಬಿರಾದಾರ, ವಿಶಾಲ ನಾಯ್ಕೋಡಿ, ಶ್ರೀಶೈಲ ಹಣಬಷ್ಟಿ, ಪಿಂಟು ಹಸನೂರ, ಪ್ರಕಾಶ ನಂದಿಕೋಲ, ಈರಣ್ಣ ಕುಂಬಾರ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!