ಭಾರಿ ಮಳೆಗೆ ದೇ.ಹಿಪ್ಪರಗಿಯಲ್ಲಿ 15 ಮನೆಗಳು ಕುಸಿತ

291

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯಾದ್ಯಂತ ಭರ್ಜರಿಯಾಗಿ ಮಳೆಯಾಗ್ತಿದೆ. ಹೀಗಾಗಿ ಮಳೆರಾಯ ಈ ಭಾಗದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ದೇವರಹಿಪ್ಪರಗಿ ತಾಲೂಕಿನಲ್ಲಿ ಬರೋಬ್ಬರಿ 15 ಮನೆಗಳು ಕುಸಿದು ಬಿದ್ದಿವೆ.

ಪಟ್ಟಣದಲ್ಲಿ 7, ಯಲಗೋಡ ಎಲ್.ಟಿ 3, ಮಣೂರ 1, ಸಾತಿಯಾಳ 1, ಯಾಳವಾರ 1, ಮುಳಸಾವಳಗಿ 1, ಹರನಾಳ 1 ಸೇರಿದಂತೆ ಬುಧವಾರ ಬರೋಬ್ಬರಿ 15 ಮನೆಗಳು ಕುಸಿದು ಬಿದ್ದಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಇದುವರೆಗೂ 221 ಮನೆಗಳು ಬಿದ್ದಿವೆ.

ಸತತ ಮಳೆಯಿಂದಾಗಿ ಮನೆಗಳು ಗೋಡೆಗಳು ನೆನೆದು ಕುಸಿದು ಬೀಳುತ್ತಿವೆ. ಹೀಗಾಗಿ ಸ್ಥಳೀಯರು ಆತಂಕದಲ್ಲಿ ಜೀವನ ಮಾಡಬೇಕಿದೆ. ಇನ್ನು ಪಟ್ಟಣದ ಜಾನೇಸಾಬ ಹೆಬ್ಬಾಳ ಇವರ ಕೊಟ್ಟಿಗೆಯ ಗೋಡೆ ಕುಸಿದಿದ್ದು, ಕುರಿಯೊಂದು ಸಾವನ್ನಪ್ಪಿದೆ. ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಬರ್ತಿರುವುದ್ರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!