ಶಾಸಕ, ಸಂಸದ, ಸರ್ಕಾರ ಬಿಜೆಪಿಯದ್ದೇ ಇರುವಾಗ ಬಸ್ ನಿಲ್ದಾಣ ವಿವಾದ ಹೇಗೆ?

228

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರು ನಗರದ ಊಟಿ ರಸ್ತೆಯಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಅದರ ವಿನ್ಯಾಸ ಗುಂಬಜ್ ಶೈಲಿಯಲ್ಲಿದೆ. ಇದಕ್ಕೆ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ. ಜೆಸಿಬಿಯಿಂದ ಕೆಡವುತ್ತೇವೆ ಎಂದಿದ್ದಾರೆ. ಹೀಗಾಗಿ ಇದು ಸಧ್ಯದ ವಿವಾದಿತ ಕೇಂದ್ರವಾಗಿದೆ.

ಮೈಸೂರು ಶಾಸಕ ಎಸ್.ಎ ರಾಮದಾಸ್ ಬಿಜೆಪಿಯವರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬಿಜೆಪಿಯವರು. ರಾಜ್ಯದಲ್ಲಿರುವ ಸರ್ಕಾರ ಬಿಜೆಪಿಯದ್ದು. ಈಗ ಬಸ್ ನಿಲ್ದಾಣದ ಗುಂಬಜ್ ವಿನ್ಯಾಸದ ಬಗ್ಗೆ ವಿವಾದ ಮಾಡುತ್ತಿರುವುದು ಬಿಜೆಪಿಯವರು. ಹೀಗಾಗಿ ಸಾರ್ವಜನಿಕರು ಇದು ಹೇಗೆ ಎನ್ನುತ್ತಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಕೆಡವಿದರೆ ಅದರ ಖರ್ಚು ಭರಿಸುವುದು ಯಾರು? ತಮ್ಮದೆ ಪಕ್ಷದ ಶಾಸಕರು, ಸರ್ಕಾರ ಇರುವಾಗ ಸಂಸದರು ಇದಕ್ಕೆ ಧಾರ್ಮಿಕ ಬಣ್ಣ ಬಳೆದು ರಾಜಕೀಯ ಮಾಡುತ್ತಿರುವುದು ಯಾಕೆ? ಆ ಕ್ಷೇತ್ರದ ಜನಪ್ರತಿನಿಧಿ ಗಮನಕ್ಕೆ ತರದೆ ಕಾಮಗಾರಿ ನಿರ್ಮಾಣವಾಯಿತಾ ಅನ್ನೋದು ಸೇರಿ ಹಲವು ಪ್ರಶ್ನೆಗಳನ್ನು ರಾಜ್ಯದ ಜನರು ಕೇಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!