ಪುಷ್ಪಾ ಸಿನಿಮಾ ಶೈಲಿಯಲ್ಲಿ ಮದ್ಯ ಸಾಗಾಟ

316

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸಿನಿಮಾ ಅನ್ನೋದು ತುಂಬಾ ಪ್ರಭಾವಿ ಮಾಧ್ಯಮ. ಏಕಕಾಲದಲ್ಲಿ ಕೋಟ್ಯಾಂತರ ಜನರನ್ನು ಸೆಳೆಯುವ ಚಿತ್ರದಿಂದ ಅನೇಕರು ಒಳ್ಳೆಯದನ್ನು ಕಲಿತರೆ ಕೆಲವರು ಕೆಟ್ಟದನ್ನು ಕಲಿಯುತ್ತಾರೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳು ಸಹ ಕೆಟ್ಟದನ್ನು ವಿಜೃಂಭಿಸುವಂತವಾಗಿವೆ. ನಟ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾ ಶೈಲಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನನ್ನು ಬಂಧಿಸಲಾಗಿದೆ.

ಗೋವಾದಿಂದ ಅಪಾರ ಪ್ರಮಾಣದಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಾಟ ನಡೆಸಿದ್ದ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಕರಾವಳಿ ಭಾಗದಿಂದ ಬರುವ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸುವರ್ಣಸೌಧದ ಹತ್ತಿರ ಲಾರಿ ತಪಾಸಣೆ ನಡೆಸಿದಾಗ ವಿವಿಧ ಕಂಪನಿಯ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದೆ.

ಲಾರಿಯಲ್ಲಿ ಫ್ಲೈವುಡ್ ಕಟ್ಟಿಗೆಗಳನ್ನು ಬಳಸಿ ಮದ್ಯದ ಬಾಟಲ್ ಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಅಂದಾಜು 25 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ ನ ಮದ್ಯದ ಬಾಟಲ್ ಗಳು ಪತ್ತೆಯಾಗಿವೆ. ವಾರಣಾಸಿಯ ವೀರೇಂದರ್ ಅನ್ನೋ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!