ಸೋಲು ತಪ್ಪಿಸಿದ ವಿಹಾರಿ-ಅಶ್ವಿನ್

278

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಆಸೀಸ್ ನೀಡಿದ 407 ರನ್ ಟಾರ್ಗೆಟ್ ಮುಟ್ಟುವಲ್ಲಿ ಭಾರತ ವಿಫಲವಾಗಿದ್ರೂ ಡ್ರಾ ಮಾಡಿಕೊಳ್ಳುವ ಮೂಲಕ ಸೋಲಿನಿಂದ ತಪ್ಪಿಸಿಕೊಂಡಿದೆ. ಹನುಮ ವಿಹಾರಿ(23) ಹಾಗೂ ರವಿಚಂದ್ರನ್ ಅಶ್ವಿನ್(39) ಜೋಡಿ ನಾಟೌಟ್ ಇರುವ ಮೂಲಕ ಸೋಲು ತಪ್ಪಿಸಿದೆ.

2ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 312 ರನ್ ಗಳಿ ಡಿಕ್ಲೀಯರ್ ಮಾಡಿಕೊಂಡು 407 ರನ್ ಗಳ ಗುರಿ ನೀಡಿತು. ಇದನ್ನ ಬೆನ್ನುಹತ್ತಿದ ಟೀಂ ಇಂಡಿಯಾ ಪಂತ್ 97 ಹಾಗೂ ಪೂಜಾರ 77 ರನ್ ಗಳಿಂದಾಗಿ ಗೆಲ್ಲುವ ಆಸೆ ಮೂಡಿಸಿತ್ತು. ಆದ್ರೆ, ಈ ಜೋಡಿ ಔಟ್ ಆಗುವ ಮೂಲಕ ಮತ್ತೆ ಟೆನ್ಷನ್ ಶುರುವಾಗಿತ್ತು.

ಈ ವೇಳೆ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಆಪತ್ತಬಾಂಧವನಾಗಿ ನಿಂತು ಡ್ರಾ ಮಾಡಿಕೊಂಡರು. ಹೀಗಾಗಿ 5 ವಿಕೆಟ್ ಕಳೆದುಕೊಂಡು 334 ರನ್ ಗಳಿಸಿತು. ಇದರೊಂದಿಗೆ 4 ಟೆಸ್ಟ್ ಪಂದ್ಯಗಳಲ್ಲಿ 1-1 ಗೆಲುವು ದಾಖಲಿಸಿದ್ದು, 1 ಡ್ರಾ ಆಗಿದ್ದು ಕೊನೆಯ ಪಂದ್ಯ ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!