ಪಟೇಲ್, ಅಶ್ವಿನ್ ದಾಳಿಗೆ ನೆಲಕಚ್ಚಿದ ಆಂಗ್ಲರು

418

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ಸ್ಟೇಡಿಯಂನಲ್ಲಿ ಬುಧುವಾರ ಪ್ರಾರಂಭವಾದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ಅಕ್ಷರ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಕಮಾಲ್ ಮಾಡಿದ್ದಾರೆ.

38 ರನ್ ನೀಡಿ 6 ವಿಕೆಟ್ ಪಡೆದ ಅಕ್ಷರ ಪಟೇಲ್, ಆಂಗ್ಲರ ಬೆನ್ನುಮೂಳೆ ಮುರಿದರು. ಪಟೇಲ್ ಅಶ್ವಿನ್ ಸಾಥ್ ನೀಡಿ 3 ವಿಕೆಟ್ ಪಡೆದ್ರು. ಇಶಾಂತ್ ಶರ್ಮಾ 1 ವಿಕೆಟ್ ಪಡೆದ್ರು. ಹೀಗಾಗಿ 48.4 ಓವರ್ ಗಳಲ್ಲಿ 112 ರನ್ ಗಳಿಗೆ ರೂಟ್ ಪಡೆ ಆಲೌಟ್ ಆಗಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿದ ರೂಟ್ ಲೆಕ್ಕಾಚಾರ ಎಲ್ಲವೂ ಉಲ್ಟಾ ಆಯ್ತು. ಸಿಬ್ಲಿ 0, ಬ್ರೆಸ್ಟೋ 0, ರೂಟ್ 17, ಸ್ಟೋಕ್ಸ್ 6, ಪೋಪ್ 1, ಫೋಕ್ಸ್ 12, ಆರ್ಚರ್ 11, ಲೀಚ್ 3, ಬೋರ್ಡ್ 3, ರನ್ ಗಳಿಸಿ ಔಟ್ ಆದ್ರು. ಜಾಕ್ ಕ್ರೌವ್ಲೆ ಬಾರಿಸಿದ 53 ರನ್ ನಿಂದಾಗಿ 100ರ ಗಡಿದಂತಾಗಿದೆ. ಇನ್ನು ಬ್ಯಾಟಿಂಗ್ ಶುರು ಮಾಡಿರುವ ಟೀಂ ಇಂಡಿಯಾ 5 ರನ್ ಗಳಿಸಿದೆ.

ಇನ್ನು ಭಾರತದ ವೇಗಿ ಇಶಾಂತ ಶರ್ಮಾ 100ನೇ ಟೆಸ್ಟ್ ಪಂದ್ಯವಾಡಿದ್ರು. ಈ ಮೂಲಕ ಇಶಾಂತ ನೂತನ ಸಾಧನೆ ಮಾಡಿದ್ರು. ಇದಕ್ಕೆ ಟೀಂ ಇಂಡಿಯಾ ಆಟಗಾರರು ಸಾಥ್ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!