ಫ್ಯಾನ್ಸ್ ಪರವಾಗಿ ಕ್ಷಮೆ ಕೇಳಿದ ದರ್ಶನ

259

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಿ ಬಾಸ್ ನಟ ದರ್ಶನ ವಿರುದ್ಧ ಹಿರಿಯ ನಟ ಜಗ್ಗೇಶ ಕೆಟ್ಟದಾಗಿ ಮಾತ್ನಾಡಿರುವ ಆಡಿಯೋ ಲೀಕ್ ಆಗಿದೆ ಎಂದು ಆರೋಪಿಸಿ ನಡೆದ ಜಟಾಪಟಿ ಸಂಬಂಧ, ದರ್ಶನ ಕ್ಷಮೆ ಕೇಳಿದ್ದಾರೆ. ತಮ್ಮ ಅಭಿಮಾನಿಗಳ ಪರ ನಟ ದರ್ಶನ ಕ್ಷಮೆ ಕೇಳಿದ್ದಾರೆ.

ಘಟನೆ ನಡೆದ ದಿನ ತಾವು ತಿರುಪತಿಯಲ್ಲಿದ್ದರು ಎಂದಿದ್ದಾರೆ. ಹಿರಿಯರು ಮುಂದೆ ಇರಬೇಕು. ಕಿರಿಯರು ಹಿಂದೆ ಇರಬೇಕು. ನಟ ಜಗ್ಗೇಶ ನಮ್ಮ ಸೀನಿಯರ್. ನಮ್ಮ ಬಗ್ಗೆ ಅವರು ಮಾತ್ನಾಡದೆ ಮತ್ಯಾರು ಮಾತ್ನಾಡಬೇಕು ಅನ್ನೋ ಮಾತನ್ನ ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ. ನನ್ನ ಅಭಿಮಾನಿಗಳಿಂದ ಜಗ್ಗೇಶ ಅವರಿಗೆ ಬೇಸರವಾಗಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!