ಶಿಖರ್ ಶತಕ.. ಆಸೀಸ್ ಗೆ 353 ರನ್ ಟಾರ್ಗೆಟ್

379

ಕಿಂಗ್ಸ್ ಟನ್, ಲಂಡನ್: ಕಿಂಗ್ಸ್ ಟನ್ ನ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಹಣಾಹಣಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ, ಭರ್ಜರಿ ಓಪನಿಂಗ್ ಕಂಡಿತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಬರ್ಜರಿಯಾಗಿ 127 ರನ್ ಗಳ ಜೊತೆಯಾಟವಾಡಿದ್ರು.

ಭರ್ಜರಿ ಶತಕ ಬಾರಿಸಿದ ಶಿಖರ್ ಧವನ್ 109 ಬಾಲ್ ಗಳಲ್ಲಿ 117 ರನ್ ಬಾರಿಸಿದ್ರು. ಈ ಮೂಲಕ ಧವನ್ 19ನೇ ಶತಕ ದಾಖಲಿಸಿದ್ರು. ಇದರ ಜೊತೆಗೆ ಇಂಗ್ಲಂಡ್ ನೆಲದಲ್ಲಿ ಧವನ್ 1000 ರನ್ ಬಾರಿಸಿದ್ರು. ದ್ರಾವಿಡ್ 12,38, ಸಚಿನ್ 10,51 ಹಾಗೂ ಗಂಗೂಲಿ 10,34 ರನ್ ಬಾರಿಸಿದ್ದಾರೆ.

ಇನ್ನೊಂದ್ಕಡೆ ರೋಹಿತ್ ಶರ್ಮಾ 57 ರನ್ ಬಾರಿಸುವ ಮೂಲಕ ಎರಡನೇ ಮ್ಯಾಚ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ರು. ಇನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ರು.

ನಾಯಕ ವಿರಾಟ್ ಕೊಹ್ಲಿ 82 ರನ್ ಬಾರಿಸಿ ಔಟ್ ಆದ್ರೆ, ಹಾರ್ದಿಕ್ ಪಾಂಡೆ ಭರ್ಜರಿ ಬ್ಯಾಟಿಂಗ್ ಮಾಡಿ 27 ಬಾಲ್ ಗಳಲ್ಲಿ 46 ರನ್ ಬಾರಿಸಿದ್ರು. ಪಾಂಡೆ ಬಳಿಕ ಬಂದ ಧೋನಿ 27 ರನ್ ಬಾರಿಸಿದ್ರು. ನಂತರ ಬಂದ ಕೆ.ಎಲ್ ರಾಹುಲ್ ಬರ್ತದ್ದಂತೆ ಸಿಕ್ಸ್ ಬಾರಿಸಿದ. ರಾಹುಲ್ 11 ಹಾಗೂ ಜಾಧವ್ ಕೊನೆ ಒಂದು ಬಾಲ್ ಗೆ ಬಂದು ಸಾಥ್ ನೀಡಿದ.

ಕಾಂಗರೂ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ ಬ್ಲೂ ಬಾಯ್ಸ್ 50 ಓವರ್ ಗಳಿಗೆ 5 ವಿಕೆಟ್ ನಷ್ಟಕ್ಕೆ 352 ರನ್ ಬಾರಿಸುವ ಮೂಲಕ ಆಸೀಸ್ ಟೀಂಗೆ 353 ರನ್ ಗಳ ಟಾರ್ಗೆಟ್ ನೀಡಿದೆ. ಈ ಮೂಲಕ ಐಸಿಸಿ ವರ್ಲ್ಡ್ ಕಪ್ ನಲ್ಲಿ ಭಾರತ ಭರ್ಜರಿಯಾಗಿ ಬ್ಯಾಟಿಂಗ್ ಮಾಡ್ತಿದೆ. ಆಸ್ಟ್ರೇಲಿಯಾ ಪರ ಸ್ಟ್ರಾಸ್ 1 ಕಲ್ಟರ್ 1, ಕಮನ್ಸ್ 1 ಹಾಗೂ ಸ್ಟೇನ್ಸ್ 2 ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!