ಆಸೀಸ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು

360

ಐಸಿಸಿ ವರ್ಲ್ಡ್ ಕಪ್ ನಲ್ಲಿ ಇಂಡಿಯಾ ಗೆಲುವಿನ ಓಟ ಮುಂದುವರೆದಿದೆ. ಆಸ್ಟ್ರೇಲಿಯಾ ವಿರುದ್ಧ ತನ್ನ ಎರಡನೇ ಪಂದ್ಯವಾಡಿದ ಕೊಹ್ಲಿ ಬಳಗ ರೋಚಕ ಗೆಲುವು ದಾಖಲಿಸಿದೆ. ಭಾರತ ನೀಡಿದ 353 ರನ್ ಗಳ ಟಾರ್ಗೆಟ್ ಬೆನ್ನುಹತ್ತಿದ್ದ ಆಸೀಸ್ ಟೀಂ 316 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನೊಪ್ಪಿಕೊಂಡಿತು.

ಶಿಖರ್ ಧವನ್ ಶತಕ, ರೋಹಿತ್ ಶರ್ಮಾ, ಕೊಹ್ಲಿ ಅರ್ಧ ಶತಕ ಹಾಗೂ ಹಾರ್ದಿಕ್ ಪಾಂಡ್ಯ, ಧೋನಿ ಅವರ ಬೆಸ್ಟ್ ಬ್ಯಾಟಿಂಗ್ ನಿಂದಾಗಿ 352 ರನ್ ಗಳ ದೊಡ್ಡ ಮೊತ್ತ ಗಳಿಸಿತ್ತು. ಈ ಬೃಹತ್ ಸ್ಕೋರ್ ಬೆನ್ನುಹತ್ತಿದ ಕಾಂಗರೂ ಟೀಂ ಆರಂಭದಲ್ಲಿ ಉತ್ತಮವಾದ ಆಟವಾಡಿತು. ವಾರ್ನರ್ 56, ಸ್ಮಿತ್ 69, ಖವಾಜಾ 42 ಭರ್ಜರಿ ಬ್ಯಾಟಿಂಗ್ ಮಾಡಿದ್ರು.

ಇನ್ನು ಆಲ್ ರೌಂಡರ್ ಮ್ಯಾಕ್ಸ್ ವೆಲ್ ದೊಡ್ಡ ಹೊಡೆತಗಳ ಮೂಲಕ ಭಾರತದಿಂದ ಗೆಲುವು ಕಸಿದುಕೊಳ್ತಾರೆ ಅನ್ನೋ ವಾತಾವರಣ ನಿರ್ಮಾಣ ಮಾಡಿದ್ರು. ಆದ್ರೆ, ಭುವನೇಶ್ವರ್ ಕುಮಾರ್ ಮ್ಯಾಕ್ಸ್ ವೆಲ್ ಹಾಗೂ ಡೇಲ್ ಸ್ಟೇನ್ ಅವರ ವಿಕೆಟ್ ಅನ್ನು ಬ್ಯಾಕ್ ಟು ಬ್ಯಾಕ್ ತೆಗೆದುಕೊಂಡು ಟೀಂ ಇಂಡಿಯಾದಲ್ಲಿ ಗೆಲುವಿನ ಆಸೆಯನ್ನ ಹೆಚ್ಚಿಗೆ ಮಾಡಿದ್ರು.

ಆಸ್ಟ್ರೇಲಿಯಾ ಸೋಲುವುದು ಪಕ್ಕಾ ಅನ್ನೋ ಟೈಂನಲ್ಲಿ ಅಲೆಕ್ಸ್ ಕ್ಯಾರಿ ಸಹ ಭರ್ಜರಿ ಬ್ಯಾಟಿಂಗ್ ಆಡುವ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಲು ನೋಡಿದ್ರು. ಕೇವಲ 25 ಬಾಲ್ ನಲ್ಲಿ ಅರ್ಧಶತಕ ಸಿಡಿಸಿದ ಕ್ಯಾರಿ ಆಸೀಸ್ ಟೀಂ ಗೆಲ್ಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ರು. ಆದ್ರೆ, ಅದೃಷ್ಟಲಕ್ಷ್ಮಿ ಭಾರತದ ಪರ ಇದ್ದಳು. ಹೀಗಾಗಿ ಸತತ ಎರಡನೇ ಗೆಲುವು ದಾಖಲಿಸಿತು. ಭುವನೇಶ್ವರ್ ಕುಮಾರ್ ಹಾಗೂ ಬೂಮ್ರಾ ತಲಾ ಮೂರು ವಿಕೆಟ್ ಪಡೆದ್ರೆ ಚಾಹಲ್ ಎರಡು ವಿಕೆಟ್ ಪಡೆಯುವ ಮೂಲಕ ಬ್ಲೂ ಬಾಯ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!