ಸರಣಿ ವಶಪಡಿಸಿಕೊಂಡ ಬ್ಲೂ ಬಾಯ್ಸ್

387

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಸರಣಿಯನ್ನ ವಶ ಪಡಿಸಿಕೊಂಡಿದೆ. 2-1 ಅಂತರದಿಂದ ವಿರಾಟ ಕೊಹ್ಲಿ ಬಳಗ ಸರಣಿ ಕೈವಶ ಮಾಡಿಕೊಂಡಿದೆ.

ಆರಂಭಿಕ ಆಟಗಾರ ರೋಹಿತ ಶರ್ಮಾ ಭರ್ಜರಿ ಶತಕ(119) ರನ್ ಹಾಗೂ ನಾಯಕ ವಿರಾಟ ಕೊಹ್ಲಿ-ಶ್ರೇಯಸ ಅಯ್ಯರ ಅದ್ಬುತ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ ನೀಡಿದ್ದ 286 ರನ್ ಗಳ ಟಾರ್ಗೆಟ್ ನ್ನ ಟೀಂ ಇಂಡಿಯಾ ತಲುಪುವ ಮೂಲಕ ಗೆಲುವಿನ ನಗೆ ಬೀರಿದೆ. 47.3 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಬಾರಿಸುವ ಮೂಲಕ ಸರಣಿಯನ್ನ ಕೈವಶ ಮಾಡಿಕೊಂಡಿತು.

6 ಸಿಕ್ಸ್, 8 ಫೋರ್ ಮೂಲಕ ರೋಹಿತ ಶರ್ಮಾ ಭರ್ಜರಿ 119 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಅಲ್ದೇ ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 9 ಸಾವಿರ ರನ್ ಗಳಿಸಿದ ವಿಶ್ವದ 3ನೇ ಆಟಗಾರ ಹಾಗೂ ಭಾರತದ 2ನೇ ಆಟಗಾರರಾದ್ರು. ಇದನ್ನ ರೆಕಾರ್ಡ್ ಮಾಡಲು 217 ಇನ್ನಿಂಗ್ಸ್ ಆಡಿದ್ದಾರೆ. ವಿರಾಟ ಕೊಹ್ಲಿ 194 ಇನ್ನಿಂಗ್ಸ್, ಎಬಿಡಿ ವಿಲಿಯರ್ಸ್ 208 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.

ವಿರಾಟ ಕೊಹ್ಲಿ 89 ರನ್ ಬಾರಿಸಿದ್ರು. ಶ್ರೇಯಸ ಅಯ್ಯರ್ 44 ರನ್, ಕೊನೆಯಲ್ಲಿ ಬಂದ ಮನಿಷ ಪಾಂಡೆ 8 ರನ್ ಬಾರಿಸಿ ನಾಟ್ ಔಟ್ ಆಗಿ ಉಳಿದ್ರು. ಕೆ.ಎಲ್ ರಾಹುಲ 19 ರನ್ ಬಾರಿಸಿ ಮತ್ತೆ ಫೇಲ್ ಆದ. ಜೋಶ್ ಹಝಲ್ ವುಡ್, ಜಂಪಾ ಹಾಗೂ ಅಗರ್ ತಲಾ 1 ವಿಕೆಟ್ ಪಡೆದ್ರು.

ಇನ್ನು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ನ ಅಬ್ಬರದ 131 ರನ್ ಹಾಗೂ ಮಾರನ್ಸ್ 54 ರನ್ ಗಳ ಆಟದಿಂದ 285 ರನ್ ಗಳನ್ನ ಬಾರಿಸಿತು. ಮೊದಲ ಪಂದ್ಯದಲ್ಲಿ ಮಿಂಚಿದ್ದ ವಾರ್ನರ್(3), ಕ್ಯಾಪ್ಟನ್ ಆರೆನ್ ಪಿಂಚ್(19) ಗಳಿಸಿ ಫೇಲ್ ಆದ್ರು. ಮಿಚಲ್ ಸ್ಟ್ರಾಕ್(0), ಅಲೆಕ್ಸ್ ಕ್ಯಾರಿ(35), ಟರ್ನರ್(4), ಅಗರ್(11), ಕಮಿನ್ಸ್(0), ಜಂಪಾ(1) ಹಾಗೂ ಜೋಶ್(1) ರನ್ ಗಳಿಸುವ ಮೂಲಕ ಸರ್ಪಪತನ ಕಂಡಿತು.

ಆಸ್ಟ್ರೇಲಿಯಾ ಟೀಂಗೆ ಈ ಬಾರಿ ಮೊಹಮ್ಮದ ಶೆಮಿ ಮಾಸ್ಟರ್ ಸ್ಟ್ರೋಕ್ ಕೊಟ್ರು. 10 ಓವರ್ ನಲ್ಲಿ 63 ರನ್ ನೀಡಿದ ಶೆಮಿ 4 ವಿಕೆಟ್ ಪಡೆದು ಮಿಂಚಿದ್ರು. ಜಡೇಜಾ 2, ಯಾದವ ಹಾಗೂ ಸೈನಿ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!