ನಾಳೆ ಚೌಡಯ್ಯ ಜಯಂತಿ: ಇದೀಗ ಮೂರ್ತಿಗೆ ಬಣ್ಣ ಹಚ್ಚುವ ಕೆಲಸ

1625

ಸಿಂದಗಿ: ನಾಳೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ. ತಾಲೂಕು ಆಡಳಿತ ವತಿಯಿಂದ ಪಟ್ಟಣದಲ್ಲಿ ಜಯಂತಿ ಆಚರಿಸಲಾಗ್ತಿದೆ. ಈ ಸಂಬಂಧ ಜನವರಿ 13ರಂದು ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ವೇಳೆ ಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯನವರ ವೃತ್ತಕ್ಕೆ ಬಣ್ಣ ಹಚ್ಚುವ ಬಗ್ಗೆ ಚರ್ಚಿಸಿ ಅದನ್ನ ಪುರಸಭೆಗೆ ಜವಾಬ್ದಾರಿ ನೀಡಲಾಯ್ತು.

ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಸೈಯದ ಅಹ್ಮದ ಅವರು, ಬಣ್ಣ ಹಚ್ಚುವ ಕೆಲಸ ಮಾಡುವುದಾಗಿ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ರು. ಅದರ ಕೆಲಸ ಇನ್ನೂ ಆಗಿಲ್ಲವೆಂದು ಸಮಾಜದ ಮುಖಂಡರು ‘ಪ್ರಜಾಸ್ತ್ರ’ದ ಜೊತೆ ಮಾತ್ನಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು. ಈ ಬಗ್ಗೆ ಪುರಸಭೆ ಆರೋಗ್ಯಾಧಿಕಾರಿ ಅಭಿಷೇಕ ಪಾಂಡೆ ಅವರನ್ನ ಕೇಳಿದ್ರೆ, ಸರ್ ನಾನು ಬೆಂಗಳೂರಿನಲ್ಲಿದೆ. ಇವತ್ತು ಕೆಲಸ ಶುರು ಮಾಡ್ತಾರೆ. ಈಗಾಗ್ಲೇ ಬಣ್ಣ ಹಚ್ಚುವವರಿಗೆ ಮುಂಗಡ ಹಣ ನೀಡಲಾಗಿದೆ ಅಂತಾ ಹೇಳಿದ್ರು.

ಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯನವರ ವೃತ್ತಕ್ಕೆ ಇದೀಗ ಬಣ್ಣ ಹಚ್ಚುವ ಕೆಲಸ ನಡೆಯುತ್ತಿದೆ. ಈ ಕೆಲಸವನ್ನ ಎರಡ್ಮೂರು ದಿನಗಳ ಹಿಂದೆಯೇ ಮಾಡಿದ್ರೆ ಚೆನ್ನಾಗಿರುತಿತ್ತು. ಈಗ ಈ ಕೆಲಸ ಮಾಡ್ತಿದ್ದು, ಅವಸರದಲ್ಲಿ ಹೇಗೇಗೋ ಬಣ್ಣ ಹಚ್ಚಿದ್ರೆ ಹೇಗೆ ಅನ್ನೋದು ಸಮಾಜದ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ದೇ, ಹಿಂದುಳಿದ ಸಮಾಜದ ಕುರಿತು ಅಧಿಕಾರಿಗಳು ಯಾಕೆ ಈ ರೀತಿ ನಡೆದುಕೊಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!