ಹೊಸ ಆಯಾಮ ಹೊಂದಿದ ಪಡಶೆಟ್ಟಿ ಪ್ರತಿಷ್ಠಾನ: ವಿ.ಡಿ ವಸ್ತ್ರದ

729

ಸಿಂದಗಿ: ಹಿರಿಯ ವಿದ್ವಾಂಸರಾದ ಡಾ.ಎಂ.ಎಂ ಪಡಶೆಟ್ಟಿ ಅವರ ಹೆಸರಿನ ಎಂ.ಎಂ ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಪಟ್ಟಣದ ಮಾಂಗಲ್ಯ ಭವನದಲ್ಲಿ ಭಾನುವಾರ ಸಂಜೆ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ವಿ.ಡಿ ವಸ್ತ್ರದ, ಈ ಪ್ರತಿಷ್ಠಾನಕ್ಕೆ ಹೊಸ ಆಯಾಮವಿದೆ. ದೇಶಿ ಸಾಹಿತ್ಯ ಕಣ್ಮರೆಯಾಗ್ತಿರುವ ಕಾಲಘಟ್ಟದಲ್ಲಿ ಈ ಪ್ರತಿಷ್ಠಾನ ಅದನ್ನ ಉಳಿಸುವ ಕೆಲಸ ಮಾಡ್ತಿದೆ. ಇದನ್ನ ಉದ್ಘಾಟನೆ ಮಾಡಿದ್ದು ನನ್ಗೆ ಸಂತೋಷವಾಗಿದೆ ಅಂತಾ ಹೇಳಿದ್ರು.

ಮುಖ್ಯ ಅತಿಥಿಗಳಾದ ಶ್ರೀಶೈಲ ನಾಗರಾಳ ಹಾಗೂ ಅರವಿಂದ ಮನಗೂಳಿ ಮಾತ್ನಾಡಿ, ಸಿಂದಗಿ ನೆಲದ ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಮೆಲುಕು ಹಾಕಿದ್ರು. ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಅಂಬಿಕಾತನಯದತ್ತ ವೇದಿಕೆಯ ಅಧ್ಯಕ್ಷರಾದ ಡಾ.ಬಿ.ಆರ್ ನಾಡಗೌಡ, ದಾಸರ ಪದಗಳನ್ನ ಕೇಳಿಕೊಂಡು ಬೆಳೆದವನು ನಾನು. ಅದು ಇಂದು ನಶಿಸ್ತಿದೆ. ಅದನ್ನ ಉಳಿಸುವ ಕೆಲಸ ಎಂ.ಎಂ ಪಡಶೆಟ್ಟಿ ಪ್ರತಿಷ್ಠಾನ ಮಾಡಬೇಕು ಅನ್ನೋ ಕಿವಿ ಮಾತುಗಳನ್ನ ಹೇಳಿದ್ರು. ಜಾನಪದ ಪರಂಪರೆಯ ಬುಡುಬುಡಕೆ, ಪೋತರಾಜ, ಹೆಳವರು, ದುರುಗಮುರುಗರು ಸೇರಿದಂತೆ ಇತರರ ಉಡುಗೆ ತೊಡುಗೆಗಳ ಫೋಟೋಗಳನ್ನ ಸಂಗ್ರಹಿಸುವುದು. ಹಂತಿಪದ, ಗೀಗೀ ಪದ, ಸೋಬಾನೆ ಪದಗಳನ್ನ ಸಂಗ್ರಹಿಸುವ ಕೆಲಸ ಮಾಡ್ತಾ ರಾಜ್ಯದಲ್ಲಿ ವಿಶೇಷ ಪ್ರತಿಷ್ಠಾನವಾಗಿ ಗುರುತಿಸಿಕೊಳ್ಳಲಿ ಅಂತಾ ಸಲಹೆ ನೀಡಿದ್ರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತ್ನಾಡಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಒಳ್ಳೆಯ ವಿದ್ವಾಂಸರ ಹೆಸರಿನಲ್ಲಿ ಪ್ರತಿಷ್ಠಾನ ಶುರುವಾಗಿದೆ ಎಂದರು. ಇದೀಗ ಎಲ್ಲದರಲ್ಲಿಯೂ ದೇಶಿ ಸಂಸ್ಕೃತಿ ಬರ್ತಿದೆ. ನಾಳೆ ಶಿಕ್ಷಣದಲ್ಲಿಯೂ ಬರಬಹುದು. ಗುರುಕುಲ ಶಿಕ್ಷಣ ಪದ್ಧತಿ ಬಂದ್ರೆ ಒಳ್ಳೆಯದು ಅನ್ನೋ ಮಾತುಗಳನ್ನಾಡಿದ್ರು.

ಅತಿಥಿಗಳೊಂದಿಗೆ ಪ್ರತಿಷ್ಠಾನದ ಸದಸ್ಯರ ಗ್ರೂಪ್ ಫೋಟೋ

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಸಂಚಾಲಕರಾದ ಡಾ.ಚನ್ನಪ್ಪ ಕಟ್ಟಿ, 38 ವರ್ಷಗಳ ಹಿಂದೆ ನಾಗೇಶ ರಾಂಪೂರ, ಎಂ.ಎಂ ಪಡಶೆಟ್ಟಿ ಹಾಗೂ ನಾನು ಸೇರಿ ನೆಲೆ ಪ್ರಕಾಶನ ಶುರು ಮಾಡಿದ್ವಿ. ಇದರ ಉದ್ಘಾಟನೆ ಮಾಡಿದಾಗ ಏಳೆಂಟು ಜನರು ಹಾಜರಿದ್ರು. ನಾಗೇಶ ರಾಂಪೂರ ಹಾಗೂ ನಾನು ಸೇರಿಕೊಂಡು ಎರಡು ಸೆಲೆ ಒಂದು ನೆಲೆ ಅನ್ನೋ ಕೃತಿ ಪ್ರಕಟಿಸಿದ್ವಿ. ಕೃತಿಯ ಕೊನೆಯ ಪದವಾದ ನೆಲೆ ತೆಗೆದುಕೊಂಡು ಪ್ರಕಾಶನ ಹುಟ್ಟು ಹಾಕಿದ್ವಿ. ಅಲ್ಲಿಂದ ಇಲ್ಲಿ ತನಕ 25ಕ್ಕೂ ಹೆಚ್ಚು ಲೇಖಕರು ಕೃತಿಗಳನ್ನ ಹೊರ ತಂದಿದ್ದೇವೆ. ಇದರಲ್ಲಿ 12 ಲೇಖಕಿಯರಿದ್ದಾರೆ. ಇದು ನಮ್ಗೆ ಹೆಮ್ಮೆಯ ವಿಷಯ ಅಂತಾ ಹೇಳಿದ್ರು. ಪ್ರತಿಷ್ಠಾನದ ವತಿಯಿಂದ ‘ದೇಶಿ ಸಮ್ಮಾನ್’ ಅನ್ನೋ ಪ್ರಶಸ್ತಿಯನ್ನ ಜಾನಪದ ಸಾಹಿತ್ಯದಲ್ಲಿ ಕೆಲಸ ಮಾಡಿದವರಿಗೆ ಪ್ರತಿವರ್ಷ ನೀಡುತ್ತೇವೆ ಅಂತಾ ತಿಳಿಸಿದ್ರು.

ಡಾ.ಎಂ.ಎಂ ಪಡಶೆಟ್ಟಿ, ಹ.ಮಾ ಪೂಜಾರಿ, ಹೆಚ್.ಟಿ ಕುಲಕರ್ಣಿ, ಎನ್.ಎಂ ಬಿರಾದಾರ, ಸುನಿಲ ಬಾಬು ಕಮತಗಿ, ಸೋಮನಾಥ ಹಂಚಿನಾಳ, ರವಿ ಮಲ್ಲೇದ, ಅಶೋಕ ಅಲ್ಲಾಪುರ, ಸಿದ್ದಲಿಂಗ ಚೌಧರಿ, ಮಲ್ಲಿಕಾರ್ಜುನ ಪಡಶೆಟ್ಟಿ, ಗೌರೀಶ ಹೈಯಾಳಕರ, ಸಂಜೀವಕುಮಾರ ಡಾಂಗಿ, ಅಶೋಕ ಬಿರಾದಾರ, ಬಸವರಾಜ ಅಗಸರ, ದೇವು ಮಾಕೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ರು. ಕಸ್ತೂರಿ ಭೂತಿ ಹಾಗೂ ವಿದ್ಯಾ ಪ್ರಾರ್ಥನಾಗೀತೆ ಹಾಡಿದ್ರು. ಎಂ.ಎಸ್ ಹೈಯಾಳಕರ ಸ್ವಾಗತ ಪರಿಚಯ ಮಾಡಿದ್ರು. ಗುರುನಾಥ ಅರಳಗುಂಡಗಿ ನಿರೂಪಿಸಿದ್ರು. ಚಂದ್ರಶೇಖರ ಚೌರ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!