ರೈನಾ ವಾಪಸ್ ಆಗ್ತಾರಾ? ಸ್ನೇಹಿತ ಆರ್.ಪಿ ಸಿಂಗ್ ಹೇಳಿದ್ದೇನು?

276

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಎಂ.ಎಸ್ ಧೋನಿ ನಿವೃತ್ತಿ ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಕ ಬ್ಯಾಟ್ಸಮನ್ ಸುರೇಶ ರೈನಾ ಸಹ ನಿವೃತ್ತಿ ಘೋಷಣೆ ಮಾಡಿದ್ರು. ಇದು ಕ್ರೀಡಾ ಪ್ರೇಮಿಗಳಿಗೆ ಬಹುದೊಡ್ಡ ಶಾಕ್ ಆಗಿತ್ತು. ಇದೀಗ ರೈನಾ ವಾಪಸ್ ಆಗ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

ಮಾಜಿ ಬೌಲರ್ ಆರ್.ಪಿ ಸಿಂಗ್

ಸುರೇಶ ರೈನಾಗೆ ಈಗ 33 ವರ್ಷ. ಇನ್ನು ಒಂದು ವರ್ಲ್ಡ್ ಕಪ್ ವರೆಗೂ ಆಡಬಹುದಾಗಿತ್ತು. ಆದ್ರೆ, ನಿವೃತ್ತಿ ಘೋಷಿಸಿದ್ರು. ರೈನಾ ಕೊನೆಯ ಟೆಸ್ಟ್ ಪಂದ್ಯ ಆಡಿದ್ದು 2015ರಲ್ಲಿ, ಲಾಸ್ಟ್ ಒನ್ ಡೇ ಆಡಿದ್ದು 2018ರಲ್ಲಿ. ಐಪಿಎಲ್ ನಲ್ಲಿ ಮಿಂಚುವ ರೈನಾ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಯಡವುತ್ತಿರುವುದೆ ಇದಕ್ಕೆಲ್ಲ ಕಾರಣ ಎನ್ನಲಾಗ್ತಿದೆ. ಆದ್ರೆ, ಆಡುವ ವಯಸ್ಸು ಇರುವಾಗ್ಲೇ ನಿವೃತ್ತಿ ಘೋಷಿಸಿದ್ದು ಅನೇಕರಿಗೆ ಅಚ್ಚರಿ ತಂದಿದೆ. ಈ ಬಗ್ಗೆ ಮಾಜಿ ವೇಗಿ ಆರ್.ಪಿ ಸಿಂಗ್, ರೈನಾ ಬಗ್ಗೆ ಮಾತ್ನಾಡಿದ್ದಾರೆ.

ರೈನಾ ಟೆಸ್ಟ್ ಪಂದ್ಯಕ್ಕೆ ಮರಳುವ ಬಗ್ಗೆ ಯೋಚನೆ ಮಾಡ್ತಿದ್ರು. ಇರ್ಫಾನ ಪಠಾಣ ಜೊತೆಗಿನ ಮಾತುಕಥೆಯಲ್ಲಿ ಈ ಬಗ್ಗೆ ಹೇಳಿದ್ದ ಎಂದಿದ್ದಾರೆ. ಅಲ್ದೇ, ಒಬ್ಬ ವ್ಯಕ್ತಿಯ ದೈಹಿಕ ಸಾಮರ್ಥ್ಯದ ಬಗ್ಗೆ ಯೋಚಿಸಬೇಕು. ರೈನಾ ಟೀಂ ಇಂಡಿಯಾಗೆ ಮರಳುವ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕಿದೆ ಎಂದು ಹೇಳಿದ್ದಾರೆ. ಇದು ರೈನಾ ಮತ್ತೆ ಬ್ಲೂ ಜರ್ಸ್ ತೊಡುವ ಸೂಚನೆ ನೀಡುತ್ತಾ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!