ಬ್ರೇಕಿಂಗ್ ನ್ಯೂಸ್: ಐಪಿಎಲ್ ಟೂರ್ನಿಯೇ ಮುಂದೂಡಿಕೆ

308

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಐಪಿಎಲ್ ನ ವಿವಿಧ ತಂಡಗಳ ಆಟಗಾರರಲ್ಲಿ, ಆಡಳಿತ ಮಂಡಳಿ ಸದಸ್ಯರಲ್ಲಿ, ಕೋಚ್ ಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಕೆಲ ಪಂದ್ಯಗಳನ್ನ ಮುಂದೂಡಲಾಗಿತ್ತು. ಆದ್ರೆ, ಇದೀಗ ಇಡೀ ಟೂರ್ನಿಯನ್ನೇ ಮುಂದೂಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ ಗವರ್ನಿಂಗ್ ಕೌನ್ಸಿಲ್ ಹಾಗೂ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ತುರ್ತು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ನಮ್ಗೆ ಆಟಗಾರರ ಆರೋಗ್ಯ ಮುಖ್ಯ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದು, ಆಟಗಾರರು ತಮ್ಮ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಿರಿ ಎಂದು ತಿಳಿಸಲಾಗಿದೆ.  




Leave a Reply

Your email address will not be published. Required fields are marked *

error: Content is protected !!