ಐಪಿಎಲ್ 2022: ಹರಾಜು ಆಗದ ಸ್ಟಾರ್ ಆಟಗಾರರ ಲಿಸ್ಟ್

415

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಶನಿವಾರ ಹಾಗೂ ಭಾನುವಾರ 15ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಹೊಸ ಮುಖಗಳು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇದರ ನಡುವೆ ಐಪಿಎಲ್ ಅಂಗಳದಲ್ಲಿ ಕಳೆದ 14 ಸೀಸನ್ ಗಳಲ್ಲಿ ಮಿಂಚಿದ ಸ್ಟಾರ್ ಆಟಗಾರರನ್ನು ಖರೀದಿಸಲೇ ಇಲ್ಲ.

ಚುಟುಕು ಕ್ರಿಕೆಟ್ ಹಾಗೂ ಐಪಿಎಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ ಸುರೇಶ್ ರೈನಾ ಸೇಲ್ ಆಗದೆ ಉಳಿದರು. ಮೂಲ ಬೆಲೆ 2 ಕೋಟಿ ಹೊಂದಿದ್ದರು. ಸಿಎಸ್ಕೆ ತಂಡ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತು. ಬೇರೆಯವರು ಖರೀದಿಸಲೇ ಇಲ್ಲ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ವೀವನ್ ಸ್ಮಿತ್, ಬಾಂಗ್ಲಾ ಮಾಜಿ ಕ್ಯಾಪ್ಟನ್ ಶಕೀಬ್ ಅಲ್ ಹಸನ್, ಆಫ್ಗನಿಸ್ತಾನ್ ಬೌಲರ್ ಮುಜೀಬ್ ರಹಮಾನ್, ಇಂಗ್ಲೆಂಡ್ ಬೌಲರ್ ಆದಿಲ್ ರಶಿದ್, ಸೌಥ್ ಆಫ್ರಿಕಾದ ಇಮ್ರಾನ್ ತಾಹಿರ್, ಆಸ್ಟ್ರೇಲಿಯಾ ಬೌಲರ್ ಆಡಂ ಜಂಪಾ ಸಹ ಸೇಲ್ ಆಗಲಿಲ್ಲ. ಇವರೆಲ್ಲ 2 ಕೋಟಿ ಮುಖಬೆಲೆ ಹೊಂದಿದ್ದರು.

ಭಾರತದ ಬೌಲರ್ ಅಮಿತ್ ಮಿಶ್ರಾ(1.5 ಕೋಟಿ), ಇಂಗ್ಲೆಂಡ್ ಬ್ಯಾಟ್ಸಮನ್ ಇಯಾನ್ ಮಾರ್ಗನ್(1.5 ಕೋಟಿ), ಆಸ್ಟ್ರೇಲಿಯಾದ ಬ್ಯಾಟ್ಸಮನ್ ಆರೆನ್ ಪಿಂಚ್(1.5 ಕೋಟಿ), ಭಾರತದ ಬೌಲರ್ ಇಶಾಂತ್ ಶರ್ಮಾ(1.5 ಕೋಟಿ), ಭಾರತದ ಬೌಲರ್ ಪಿಯೂಶ್ ಚಾವ್ಲಾ(1 ಕೋಟಿ), ನ್ಯೂಜಿಲೆಂಡ್ ಬ್ಯಾಟ್ಸಮನ್ ಮಾರ್ಟಿನ್ ಗುಪ್ಟಿಲ್(75 ಲಕ್ಷ), ಭಾರತದ ಬೌಲರ್ ಧವನ್ ಕುಲಕರ್ಣಿ(75 ಲಕ್ಷ), ಭಾರತದ ಬೌಲರ್ ಪವನ್ ನೇಗಿ(50 ಲಕ್ಷ), ಭಾರತದ ಬ್ಯಾಟ್ಸಮನ್ ಚೇತೇಶ್ವರ್ ಪೂಜಾರಿ(50 ಲಕ್ಷ) ಸೇರಿದಂತೆ 83ಕ್ಕೂ ಹೆಚ್ಚು ಆಟಗಾರರು ಸೇಲ್ ಆಗಿಲ್ಲ.

ರೈನಾ, ಹಸನ್, ತಾಹಿರ್, ಸ್ಮಿತ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರ ಐಪಿಎಲ್ ಕರಿಯರ್ ಮುಗಿಯಿತು ಎಂದೇ ಹೇಳಬಹುದು. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಆಡುವ ಉತ್ಸುಕತೆ ತೋರಿಸಿದ್ದ ಬೌಲರ್ ಶ್ರೀಶಾಂತ್ ಹರಾಜಿನಲ್ಲೇ ಕಾಣಿಸಿಕೊಂಡಿಲ್ಲ.




Leave a Reply

Your email address will not be published. Required fields are marked *

error: Content is protected !!