ಜಾರ್ಖಂಡ್ ಚುನಾವಣೆ: ಕೊನೆಯ ಹಂತದ ಮತದಾನ

324

ರಾಂಚಿ: ಜಾರ್ಖಂಡ್ ನಲ್ಲಿಂದು ಕೊನೆಯ ಹಂತದ ಮತದಾನ ನಡೆಯುತ್ತಿದೆ. 16 ಸ್ಥಾನಗಳಿಗೆ ವೋಟಿಂಗ್ ನಡೆದಿದ್ದು 26 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 237 ಜನ ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ. ಸಂಜೆ 5 ಗಂಟೆಗೆ ವೋಟಿಂಗ್ ಮುಕ್ತಾಯವಾಗಲಿದ್ದು, ಕೆಲವಡೆ ಮಧ್ಯಾಹ್ನ 3 ಗಂಟೆಗೆ ಮುಗಿಯಲಿದೆ.

ಮಾಜಿ ಸಿಎಂ ಹಾಗೂ ಜೆಎಂಎಂ ನಾಯಕ ಹೇಮಂತ ಸೊರೆನ್, ಸಚಿವ ರಣಧೀರ ಸಿಂಗ್ ಸಹ ಸ್ಪರ್ಧೆಗೆ ಇಳಿದಿದ್ದಾರೆ. 237 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನ 40 ಲಕ್ಷದ  5 ಸಾವಿರದ 200 ಮತದಾರರು ನಿರ್ಧರಿಸಲಿದ್ದಾರೆ. 81 ವಿಧಾನಸಭಾ ಕ್ಷೇತ್ರಗಳಿಗೆ 4 ಹಂತದಲ್ಲಿ ವೋಟಿಂಗ್ ನಡೆದಿದೆ. ಡಿಸೆಂಬರ್ 23, ಸೋಮವಾರ ಫಲಿತಾಂಶ ಹೊರ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!