32 ಕ್ಷೇತ್ರಗಳಲ್ಲಿ ಇಬ್ಬರ ಹೆಸರು.. ಕಾಂಗ್ರೆಸ್ 2ನೇ ಪಟ್ಟಿ ಸಿದ್ಧ

155

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಈಗಾಗ್ಲೇ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ 2ನೇ ಪಟ್ಟಿ ಸಿದ್ಧತೆ ಮಾಡಿದ್ದು, 32 ಕ್ಷೇತ್ರಗಳಲ್ಲಿ ಇಬ್ಬರ ಹೆಸರು, 7 ಕ್ಷೇತ್ರಗಳಲ್ಲಿ ನಾಲ್ವರ ಹೆಸರುಗಳನ್ನು ಕಳುಹಿಸಲಾಗಿದೆಯಂತೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಸಮಿತಿ, ಸ್ಕ್ರೀನಿಂಗ್ ಕಮಿಟಿ ಕಳುಹಿಸಿರುವ ಒಂದೇ ಹಸರು ಇರುವ 60 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರದೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎರಡು ಹೆಸರು, ನಾಲ್ಕು ಹೆಸರು, 7 ಹೆಸರುಗಳು ಇರುವುದನ್ನು ಇಂದು ತೆಗೆದು ಹಾಕಿ ಒಂದು ಹೆಸರು ಉಳಿಸಿ ಪ್ರಕಟಿಸಲಿದೆಯಂತೆ.

2ನೇ ಪಟ್ಟಿಯಲ್ಲಿ ಸಹ ಉಳಿದ 100 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುವ ಬದಲು ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ನೋಡಿಕೊಂಡು 3ನೇ ಪಟ್ಟಿ ಬಿಡುಗಡೆ ಮಾಡಲಿದ್ದು, ಅದರಲ್ಲಿ ಬಿಜೆಪಿ, ಜೆಡಿಎಸ್ ನಿಂದ ಬಂದವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!